76ನೇ ವಿಶ್ವ ಆರೋಗ್ಯ ಅಸೆಂಬ್ಲಿಯಲ್ಲಿ ಮಾತನಾಡಿದ ಘೆಬ್ರೆಯೆಸಸ್, ರೋಗ ಹಾಗೂ ಸಾವಿನ ಸಂಖ್ಯೆಯನ್ನು ಉಲ್ಬಣಗೊಳಿಸುವ ಮತ್ತೊಂದು ರೂಪಾಂತರದ ಬೆದರಿಕೆ ಇನ್ನೂ ಕೂಡಾ ಉಳಿದಿದೆ. ಮುಂದಿನ ಸಾಂಕ್ರಾಮಿಕ ರೋಗಕ್ಕೆ ಜಗತ್ತು ಸಿದ್ಧವಾಗಬೇಕು. ಇದು ಕೋವಿಡ್-19 ಗಿಂತಲೂ ಹೆಚ್ಚು ಮಾರಣಾಂತಿಕವಾಗಿರಬಹುದು. ಪ್ರಪಂಚದಾದ್ಯಂತ ಕೋವಿಡ್ ಪ್ರಕರಣಗಳು ಸ್ವಲ್ಪಮಟ್ಟಿಗೆ ಸ್ಥಿರಗೊಳ್ಳುತ್ತಿದ್ದರೂ ಕೋವಿಡ್‌ನ ಅಂತ್ಯ ಜಾಗತಿಕ ಆರೋಗ್ಯ ಬೆದರಿಕೆಯ ಅಂತ್ಯವಲ್ಲ ಮುಂದಿನ ಸಾಂಕ್ರಾಮಿಕ ಜಗತ್ತಿಗೆ ಕರೆಗಂಟೆಯಾಗಿದ್ದು, ಮತ್ತೆ ಭೀತಿಯನ್ನು ಹುಟ್ಟಿಸಲಿದೆ. ಇದಕ್ಕಾಗಿ ನಾವು ನಿರ್ಣಾಯಕವಾಗಿ, ಸಾಮೂಹಿಕವಾಗಿ ಹಾಗೂ ಸಮಾನವಾಗಿ ಉತ್ತರ ನೀಡಲು ಸಿದ್ಧರಾಗಿರಬೇಕು ಎಂದು ಡಬ್ಲ್ಯುಹೆಚ್‌ಒನ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.