ಆಫ್ರಿಕಾದ ಈಕ್ವಟೋರಿಯಲ್ ಗಿನಿಯಾದಲ್ಲಿ ಎಬೋಲಾ ತರಹದ ಮಾರ್ಬರ್ಗ್ ವೈರಸ್ ಪತ್ತೆಯಾಗಿದ್ದು, ಏಕಾಏಕಿ 9 ಮಂದಿ ಸಾವನ್ನಪ್ಪಿದ್ದಾರೆ ಹಣ್ಣಿನ ಬಾವಲಿಗಳಿಂದ ಹರಡುವ ಮಾರ್ಬರ್ಗ್ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದೆ. ವಿಪರೀತ ವಾಂತಿ, ಅತಿಸಾರ, ಜ್ವರ ಮತ್ತು ಆಯಾಸದಂತಹ ತೀವ್ರ ರಕ್ತಸ್ರಾವದ ಲಕ್ಷಣಗಳೊಂದಿಗೆ ಹೆಮರಾಜಿಕ್ ಜ್ವರವನ್ನು ಉಂಟು ಮಾಡುತ್ತದೆ. ಇದು ಎಬೋಲಾ ಕಾಯಿಲೆಯಂತೆಯೇ ಇದೆ ಮಾರ್ಬರ್ಗ್ ವೈರಸ್ ಬಾವಲಿ ಗಳಿಂದ ಮನುಷ್ಯರಿಗೆ ಹರಡುತ್ತದೆ. ನಂತರ ಇದು ಸೋಂಕಿತ ರೋಗಿಯ ದೈಹಿಕ ದ್ರವಗಳು, ಮೇಲ್ಮೈಗಳು ಮತ್ತು ವಸ್ತುಗಳ ನೇರ ಸಂಪರ್ಕದ ಮೂಲಕ ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ವೈರಸ್ ಚಿಕಿತ್ಸೆಗಾಗಿ ಇಲ್ಲಿಯವರೆಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆಯಿಲ್ಲ.