ಹೈದರಾಬಾದ್‌ನ ಭಾರತ್‌ಬಯೋಟೆಕ್‌ಅಭಿವೃದ್ಧಿಪಡಿಸಿರುವ ಮೂಗಿನ ಮೂಲಕ ಹಾಕುವ ಕೋವಿಡ್‌ಲಸಿಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಮಂಗಳವಾರ ಅನುಮೋದನೆ ನೀಡಿದೆ. 18 ವರ್ಷ ಮೇಲ್ಪಟ್ಟವರಿಗಾಗಿ ತುರ್ತು ಬಳಕೆಗೆ ಲಸಿಕೆ ಲಭ್ಯ ಇರಲಿದೆ. ಇದು ವಿಶ್ವದಲ್ಲೇ ಮೊದಲ ಇಂಟ್ರಾ ನೇಸಲ್ ಲಸಿಕೆಯಾಗಿದೆ. ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ಮಾಂಡವೀಯ ‘ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೊರೋನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟುಬಲ ಬಂದಿದೆ.