ಸಾಕ್ರಾಮಿಕ ಸೋಂಕು ವಿಶ್ವದಲ್ಲಿ ಲಕ್ಷಾಂತರ ಜನರನ್ನು ಬಲಿ ತೆಗೆದುಕೊಂಡಿದೆ. ಚೀನಾ ದೇಶದಿಂದಲೇ ಆರಂಭವಾಗಿದ್ದ ಕೋವಿಡ್‌ಪ್ರಕರಣಗಳು ಚೀನಾದಲ್ಲಿ ಮತ್ತೊಮ್ಮೆ ಹೆಚ್ಚಿವೆ. ಪ್ರತಿದಿನ ಕಾಣಿಸಿಕೊಳ್ಳುತ್ತಿರುವ ಹೊಸ ಕೋವಿಡ್‌ಪ್ರಕರಣಗಳು ಚೀನಾದಲ್ಲಿ ಹಿಂದಿನ ದಾಖಲೆಗಳನ್ನು ಮುರಿದಿವೆ.ಚೀನಾದ ರಾಷ್ಟ್ರೀಯ ಆರೋಗ್ಯ ಬ್ಯೂರೋ ಪ್ರಕಾರ, ನಿನ್ನೆ ಬುಧವಾರ ಒಂದೇ ದಿನಕ್ಕೆ 31,454 ಹೊಸ ಪ್ರಕರಣಗಳು ವರದಿಯಾಗಿವೆ. ಕೋವಿಡ್‌ಸೋಂಕನ್ನು ನಿಯಂತ್ರಿಸಲು ಲಾಕ್‌ಡೌನ್, ಸಾಮೂಹಿಕ ಪರೀಕ್ಷೆ ಮತ್ತು ಪ್ರಯಾಣಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ.