ರಾಜ್ಯದಲ್ಲಿ ಸರ್ಕಾರಿ ಮತ್ತು ಅನುದಾನಿ ಶಾಲೆಗಳ ಮಕ್ಕಳಿಗೆ ಹಾಗೂ ಅಂಗನವಾಡಿ ಶಾಲೆಯ ಮಕ್ಕಳಿಗೆ ಪೌಷ್ಠಿಕತೆ ಹೆಚ್ಚಿಸುವ ನಿಟ್ಟಿನಲ್ಲಿ 10 ವರ್ಷಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೀರ ಭಾಗ್ಯ ಯೋಜನೆಗೆ ಚಾಲನೆ ನೀಡಿದ್ದರು. ಹೀಗಾಗಿ, ಅವರನ್ನು ಕರ್ನಾಟಕ ಕ್ಷೀರ ಭಾಗ್ಯ ಪಿತಾಮಹ ಎಂತಲೇ ಕರೆಯಲಾಗುತ್ತಿದೆ. ಈಗ ಕ್ಷೀರಭಾಗ್ಯ ಯೋಜನೆ ದಶಮಾನೋತ್ಸವ ಆಚರಣೆ ಮಾಡುತ್ತಿದ್ದು, ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ಆಯೋಜನೆ ಮಾಡಲಾಗಿದ್ದ ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮದಲ್ಲಿ. ಮಾತನಾಡಿದ ಅವರು ರಾಜ್ಯ ಬಹು ಮುಖ್ಯ ಕಾರ್ಯಕ್ರಮ ಕ್ಷೀರಭಾಗ್ಯವಾಗಿದೆ. ಈ ಯೋಜನೆಗೆ ಹತ್ತು ವರ್ಷ ತುಂಬಿದೆ. 2013ರಲ್ಲಿ ಬೆಂಗಳೂರಿನ ಹೊಸಕೋಟೆಯಲ್ಲಿ ಉದ್ಘಾಟನೆ ಆಯ್ತು. ಅವತ್ತು ನಾನೇ ಸಿಎಂ ಆಗಿದ್ದೆನು. ಇವತ್ತು ದಶಮಾನೋತ್ಸವ ಕಾರ್ಯಕ್ರಮದಲ್ಲೂ ನಾನೇ ಸಿಎಂ ಆಗಿದ್ದೇನೆ.ನಮ್ಮ ಸರ್ಕಾರದ ಪ್ರಮುಖ ಫ್ಲಾಗ್ ಶೀಪ್‌ಕಾರ್ಯಕ್ರಮದಲ್ಲಿ ಇದು ಒಂದಾಗಿದೆ.ನಾನು ಸಿಎಂ ಆಗಿದ್ದಾಗ ಹಾಲು ಉತ್ಪಾದಕರ ಒಕ್ಕೂಟಗಳ ಅಧ್ಯಕ್ಷರು, ಸಹಕಾರಸಚಿವರು, ಪಶುಸಂಗೋಪನ ಸಚಿವರು ಸೇರಿಕೊಂಡು ನನ್ನ ಬಳಿ ಬಂದು ಕರ್ನಾಟಕದಲ್ಲಿ ಹಾಲು ಉತ್ಪಾದನೆ ಜಾಸ್ತಿಯಾಗಿದೆ.ಹಾಲು ಮಾರಾಟ ಮಾಡಲು ಆಗುತ್ತಿಲ್ಲ, ನಮಗೆ ನಷ್ಟವಾಗುತ್ತಿದೆ. ಹಿಗಾಗಿ, ಸರ್ಕಾರ ಏನಾದ್ರೂ ಮಾಡಬೇಕೆಂದು ನನ್ನಲ್ಲಿ ಪ್ರಸ್ತಾಪ ಮಾಡಿದ್ದರು. ಆಗ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದ 100ರಲ್ಲಿ ಶೇ.80 ರಷ್ಟು ಮಕ್ಕಳು ದಲಿತ, ಹಿಂದೂಳಿದ ಹಾಗೂ ಅಲ್ಪಸಂಖ್ಯಾತ ಕುಟುಂಬದವರಾಗಿದ್ದರು. ಆ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಹಾಲು ಕೊಡಬೇಕು ಚಿಂತನೆ ಮಾಡಲಾಯಿತು. ಈ ಮೂಲಕ ಕೆಎಂಎಫ್‌ಗೆ ಅನುಕೂಲವಾಗುತ್ತೆ ಅಂತ ತೀರ್ಮಾನ ಮಾಡಿದ್ದೆವು.ನಂತರ, ಸರ್ಕಾರಿ, ಅನುದಾನಿತ ಹಾಗೂ ಅಂಗನವಾಡಿ ಮಕ್ಕಳಿಗೆ ಹಾಲು ಕೊಡಬೇಕು ಅಂತ ತೀರ್ಮಾನ ಮಾಡಿದೆವು. ಒಬ್ಬ ಮಗುವಿಗೆ 150 ಮಿಲಿ ಲೀಟರ್ ಹಾಲು ಕೊಡುವ ಯೋಜನೆಯನ್ನು ಜಾರಿಗೆ ತರಲಾಯಿತು. ಒಟ್ಟು 54,68,000 ಮಕ್ಕಳಿಗೆ ಈಗ ಹಾಲು ಕೊಡುತ್ತಿದ್ದೇವೆ. ಹಾಲು ಕ್ಯಾಲಿಷಿಯಂ ಇರುವಂತಹ ಪರಿಪೂರ್ಣ ಆಹಾರವಾಗಿದೆ. ಈ ಕಾರ್ಯಕ್ರಮ 10 ವರ್ಷದಿಂದ ಯಶಸ್ವಿಯಾಗಿ ನಡೆದು, ಇದೀಗ 11 ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಅದರ ದಶಮಾನೋತ್ಸವ ಕಾರ್ಯಕ್ರಮವನ್ನು ಇಲ್ಲಿ ಮಾಡುತ್ತಿದ್ದೇವೆ. ಕ್ಷೀರಭಾಗ್ಯ ಯೋಜನೆಗೆ ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಡೈರಿ ಫೆಡ್ರೇಷನ್‌ನವರು ಪ್ರಶಸ್ತಿ ಕೊಟ್ಟಿದ್ದಾರೆ. ಮತ್ತೊಂದೆಡೆ ರಾಜ್ಯದಲ್ಲಿ ಶೂ ಭಾಗ್ಯ ಯೋಜನೆಘೋಷಣೆ ಮಾಡಿದ್ದು ಮಧುಗಿರಿಯಲ್ಲೇ ಎಂದು ಹೇಳಿದರು.