ಕಳೆದ ಎರಡು ವರ್ಷಗಳಿoದ ಗಣೇಶೋತ್ಸವದ ಆಚರಣೆ ಕೊರೊನಾವೈರಸ್ ನಿoದ ಸರ್ಕಾರದ ನಿರ್ಬಂಧಗಳಿಂದ ಅತ್ಯಂತ ಸರಳವಾಗಿ ನಡೆದಿತ್ತು. ಇದರಿಂದ ವ್ಯಾಪಾರಿಗಳು, ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಸಾಕಷ್ಟು ತೊಂದರೆ ಅನುಭವಿಸಿದ್ದರು. ಈ ವರ್ಷ ವಿಜೃಂಭಣೆಯಿಂದ ಗಣೇಶೋತ್ಸವ ನಡೆಸಲು ಉತ್ಸವ ಸಮಿತಿಗಳು, ಯುವ ಮಂಡಳಿ, ವಾರ್ಡನ್ ಸಂಘ ಸಂಸ್ಥೆಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಆದರೆ ಬಿಬಿಎಂಪಿ ಮಾತ್ರ ಆಚರಣೆ ಕುರಿತಂತೆ ಅಧಿಕೃತ ಮಾರ್ಗಸೂಚಿಯನ್ನೇ ನೀಡಿಲ್ಲ. ಈ ಬಗ್ಗೆ ಮೂರ್ತಿ ತಯಾರಕರು, ಉತ್ಸವ ಮಂಡಳಿಗಳಲ್ಲಿ ತುಸು ಗೊಂದಲ ಉಂಟಾಗಿದೆ