ಮೊನ್ನೆ ಸುರಿದ ಭಾರೀ ಮಳೆಯಿಂದ ನಗರದಲ್ಲಿ ಬೃಹತ್ ಗುಂಡಿಗಳು ಬಿದ್ದಿದ್ದು, ಅದನ್ನ ಮುಚ್ಚಲು ಕಟ್ಟಡದ ಅವಶೇಷದ ಡೆಬ್ರಿಸ್ ಹಾಕಿ ಪ್ಯಾಚ್ ವರ್ಕ್ ಮಾಡ್ತಿದ್ದಾರೆ. ಗುಂಡಿ ಮುಚ್ಚಿ ಜೀವಗಳನ್ನ ಉಳಿಸಬೇಕಾದ ಪಾಲಿಕೆ, ಮತ್ತೆ ಅದೇ ಬೇಜವಾಬ್ದಾರಿತನ ತೋರಿಸ್ತಿದೆ. ಸಿಟಿ ಮಾರ್ಕೆಟ್, ಸಿರ್ಸಿ ಸರ್ಕಲ್, ಮೈಸೂರ್ ರೋಡ್‍ನಲ್ಲಿ ಕಟ್ಟಡದ ತ್ಯಾಜ್ಯವನ್ನ ಸುರಿದು ಪ್ಯಾಚ್ ವರ್ಕ್ ಮಾಡ್ತಿದ್ದಾರೆ. ನಯಾ ಪೈಸೆ ಖರ್ಚಿಲ್ಲದೇ ಗುಂಡಿಗಳನ್ನ ಮುಚ್ಚಿದ್ದಾರೆ. ಪಾಲಿಕೆಯ ಬುದ್ಧಿವಂತ ಅಧಿಕಾರಿಗಳು, ಕಳ್ಳ ಕೆಲಸ ಮಾಡಿ, ನಕಲಿ ಬಿಲ್ ಸೃಷ್ಟಿಸಿ ಸಖತ್ ಡ್ರಾಮಾ ನಡೆಸ್ತಿದ್ದಾರೆ.