ಗುಜರಾತ್‌ನ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 5 ಸ್ಥಾನಗಳನ್ನು ಗೆದ್ದಿರುವುದು ಎತ್ತುವಿನಿಂದ ಹಾಲು ಕರೆದಷ್ಟು ದೊಡ್ಡ ಸಾಧನೆ: ಕೇಜ್ರಿವಾಲ್

ದೆಹಲಿಯಲ್ಲಿ ಆಪ್ ರಾಷ್ಟ್ರೀಯ ಕೌನ್ಸಿಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಅರವಿಂದ್ ಕೇಜ್ರಿವಾಲ್, ಒಂದು ವರ್ಷದಲ್ಲಿ ನಾವು ಪಂಜಾಬ್ ಅನ್ನು ಪಡೆದುಕೊಂಡಿದ್ದೇವೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್, ಗೋವಾದಲ್ಲಿ 2 ಶಾಸಕರು ಹಾಗೂ ಗುಜರಾತ್‌ನಲ್ಲಿ ಶೇ.14 ರಷ್ಟು ಮತಗಳನ್ನು ಪಡೆಯುವ ಮೂಲಕ ನಮ್ಮ 5 ಶಾಸಕರು ಗೆದ್ದಿದ್ದಾರೆ. ಎಲ್ಲರೂ ಹಸುವಿನಿಂದ ಹಾಲು ಕರೆಯುತ್ತಾರೆ. ಆದರೆ ನಾವು ಎತ್ತುವಿನಿಂದ ಹಾಲು ಕರೆದಿದ್ದೇವೆ ಎಂದು ತಮ್ಮ ಪಕ್ಷದ ಸಾಧನೆಯನ್ನು ಕೊಂಡಾಡಿದ ಕೇಜ್ರಿವಾಲ್ 2027ರಲ್ಲಿ ಗುಜರಾತ್‌ನಲ್ಲಿ ನಮ್ಮ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದರು.

Leave a Reply

Your email address will not be published. Required fields are marked *