ಗುಜರಾತ್ ಚುನಾವಣೆ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮಹತ್ವದ ಘೋಷಣೆ ಮಾಡಿದ್ದಾರೆ. ಗುಜರಾತ್ ಜನತೆಯಲ್ಲಿ ಒಂದೇ ಒಂದು ಬಾರಿ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ನಮಗೆ ಅವಕಾಶ ನೀಡಿದರೆ ಉಚಿತ ವಿದ್ಯುತ್, ಉಚಿತ ಶಾಲೆ ಹಾಗೂ ಉಚಿತ ಆಸ್ಪತ್ರೆ ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ. ಇಷ್ಟೇ ಅಲ್ಲ ಗುಜರಾತ್ ಜನರನ್ನು ಉಚಿತವಾಗಿ ಆಯೋಧ್ಯೆಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದಾರೆ. ಈ ಮೂಲಕ ಹಿಂದೂ ಮತದಾರರ ಮತ ಸೆಳೆಯಲು ಉಚಿತ ಆಫರ್ ಜೊತೆಗೆ ಧರ್ಮದ ಆಫರ್ ಕೂಡ ನೀಡಿದ್ದಾರೆ.