ಬಿಜೆಪಿ ಪಾಳಯಕ್ಕೆ ಪಕ್ಷಾಂತರ ಪರ್ವ ಬಿಸಿ ತಟ್ಟಿದೆ. ಇದೀಗ ಬಿಜೆಪಿ ಹಿರಿಯ ನಾಯಕ, ಮಾಜಿ ಆರೋಗ್ಯ ಸಚಿವ ಜಯ್ ನಾರಾಯಣ್ ವ್ಯಾಸ ಪಕ್ಷ ತೊರೆದಿದ್ದಾರೆ. ಬಿಜೆಪಿಯಿಂದ ಈ ಬಾರಿ ಜಯ್ ನಾರಾಯಣ್ ವ್ಯಾಸ್ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಡೌಟ್. ಇದರ ಬೆನ್ನಲ್ಲೇ ಪಕ್ಷ ತೊರೆದಿದ್ದಾರೆ. ಬಿಜೆಪಿಯಲ್ಲಿ ನಾನೊಬ್ಬ ಹಿರಿಯ ರಾಜಕಾರಣಿ. ಆದರೆ ಕಳೆದ ಕೆಲ ವರ್ಷದಿಂದ ನೋವು, ದೂರುಗಳನ್ನು ನೀಡುತ್ತಲೇ ಬಂದಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಬಿಜೆಪಿ ತೊರೆಯುತ್ತಿದ್ದೇನೆ. ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಾರ್ಟಿ. ಎರಡು ಆಯ್ಕೆಗಳು ಮುಂದಿದೆ. ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ ಎಂದು ಜಯ್ ನಾರಾಯಣ್ ವ್ಯಾಸ್ ಹೇಳಿದ್ದಾರೆ.