ಹೊಸದಾಗಿ ನೇಮಕಗೊಂಡ 71 ಸಾವಿರ ಉದ್ಯೋಗಿಗಳಿಗೆ ಏಪ್ರಿಲ್ 13ರಂದು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್‌ಮೂಲಕ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಅಲ್ಲದೇ ಈ ವೇಳೆ ಅವರು ಹೊಸದಾಗಿ ನೇಮಕಗೊಂಡವರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ ತಿಳಿಸಿದೆ. ಈ ಕಾರ್ಯಕ್ರಮವನ್ನು ಭಾರತದ ಪ್ರಧಾನ ಮಂತ್ರಿಗಾಗಿ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.ಇದು ಸರ್ಕಾರ ಆಯೋಜಿಸುತ್ತಿರುವ ‘ಉದ್ಯೋಗ ಮೇಳ’ ಯೋಜನೆಯ ಭಾಗವಾಗಿದ್ದು, ಸುಮಾರು 10 ಲಕ್ಷ ಮಂದಿಗೆ ಉದ್ಯೋಗ ನೀಡಲು ಸರ್ಕಾರ ಮುಂದಾಗಿದೆ. ಈ ನೇಮಕಾತಿಯಡಿಯಲ್ಲಿ ಕೇಂದ್ರ ಸರ್ಕಾರದ ಉದ್ಯೋಗಗಳಾದ ರೈಲು ವ್ಯವಸ್ಥಾಪಕ, ಸ್ಟೇಶನ್‌ಮಾಸ್ಟರ್, ಟಿಕೆಟ್‌ಕ್ಲರ್ಕ್, ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್, ಸ್ಟೆನೋಗ್ರಾಫರ್, ಅಕೌಂಟೆಂಟ್, ಪೋಸ್ಟಲ್‌ಅಸಿಸ್ಟೆಂಟ್, ಶಿಕ್ಷಕ ಸೇರಿದಂತೆ ಹಲವು ಹುದ್ದೆಗಳನ್ನು ನೀಡಲಾಗುತ್ತದೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಹೊಸದಾಗಿ ನೇಮಕಗೊಂಡವರಿಗೆ ಆನ್‌ಲೈನ್ ಓರಿಯಂಟೇಶನ್ ಕೋರ್ಸ್ ಆಗಿರುವ ‘ಕರ್ಮಯೋಗಿ ಪ್ರಾರಂಭ’ ಮೂಲಕ ತರಬೇತಿ ಪಡೆಯುವ ಅವಕಾಶವನ್ನು ಅವರು ಪಡೆಯುತ್ತಾರೆ ಎಂದು ಪ್ರಕಟಣೆ ಹೊರಡಿಸಲಾಗಿದೆ.