ಭಾರತದಲ್ಲಿ ಆಹಾರ ಭದ್ರತೆಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಯೋಚಿಸಿದೆ. ಇದರ ಬೆನ್ನಲ್ಲೆ ಈಜಿಪ್ಟ್ನೊಂದಿಗೆ ಒಪ್ಪಂದವೊಂದನ್ನ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.ಹೌದು.. ಭಾರತ ಮತ್ತು ಈಜಿಪ್ಟ್ ದೇಶಗಳು ದ್ವಿಪಕ್ಷೀಯ ವ್ಯಾಪಾರವನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಎರಡು ಸರಕುಗಳ ಕೊರತೆಯನ್ನು ನಿಭಾಯಿಸಲು ಗೋಧಿ-ಗೊಬ್ಬರಗಳ ಒಪ್ಪಂದವನ್ನು ಚರ್ಚಿಸುತ್ತಿವೆ.ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಈಜಿಪ್ಟ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ದೇಶಗಳು ತಮ್ಮ ಸಂಬಂಧವನ್ನು ಒಪ್ಪಂದದ ಮೂಲಕ ಹೆಚ್ಚಿಸಿಕೊಂಡಿವೆ. 2027ರ ವೇಳೆಗೆ ದ್ವಿಮುಖ ವ್ಯಾಪಾರವನ್ನು $ 12 ಬಿಲಿಯನ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿವೆ.ಎರಡು ದೇಶದ ನಾಯಕರು ಅವರ ಅವಶ್ಯಕತೆಯ ಬಗ್ಗೆ ಪ್ರಸ್ತಾಪಿಸಿದ್ದು ಗೋಧಿ-ಗೊಬ್ಬರಗಳ ಪರಸ್ಪರ ರಫ್ತಿನ ಬಗ್ಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ. ಇದು ಎರಡೂ ದೇಶಗಳಿಗೆ ಆಹಾರ ಭದ್ರತೆಯನ್ನು ಖಚಿತಪಡಿಸುತ್ತದೆ ಎಂದು ಹೇಳಲಾಗುತ್ತಿದೆ.