ಶತಕೋಟ್ಯಧಿಪತಿ ಗೌತಮ್ ಅದಾನಿ ಸಮೂಹದ ಕಂಪನಿಯ ಬಗ್ಗೆ 2016 ರಿಂದ ಯಾವುದೇ ತನಿಖೆ ನಡೆಸಿಲ್ಲ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.ಅದಾನಿ ಕಂಪನಿಯ ಹಿಂಡೆನ್ಬರ್ಗ್ ಮಾಡಿದ ಆರೋಪದ ಬಗ್ಗೆ ತನಿಖೆ ನಡೆಸಲು 6 ತಿಂಗಳು ಕಾಲಾವಕಾಶ ನೀಡಬೇಕೆಂದು ಕೋರಿ ಸೆಬಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ಮುಖ್ಯ ನ್ಯಾ. ಡಿವೈ ಚಂದ್ರಚೂಡ್, ನ್ಯಾ. ಪಿಎಸ್ ನರಸಿಂಹ ಮತ್ತು ನಾ. ಜೆಬಿ ಪರ್ದಿವಾಲಾ ಪೀಠದಲ್ಲಿ ನಡೆಯಿತು.ಸೋಮವಾರವೂ ಸೆಬಿ ತನ್ನ ತನಿಖೆಯನ್ನು ಪೂರ್ಣಗೊಳಿಸಲು ಸಮಯ ವಿಸ್ತರಣೆಯ ಅಗತ್ಯವಿದೆ ಎಂದು ಪುನರುಚ್ಚರಿಸಿತು. ಈ ವೇಳೆ ಪೀಠ, ನಾವು ಈಗ 6 ತಿಂಗಳು ನೀಡಲು ಸಾಧ್ಯವಿಲ್ಲ. ಕೆಲಸದಲ್ಲಿ ಸ್ವಲ್ಪ ಎಚ್ಚರ ಅಗತ್ಯ. ಒಂದು ತಂಡವನ್ನು ರಚಿಸಿ ಕೆಲಸ ಮಾಡಿ. ನಾವು ಆಗಸ್ಟ್ ಮಧ್ಯದಲ್ಲಿ ಪ್ರಕರಣವನ್ನು ಪಟ್ಟಿ ಮಾಡಬಹುದು ಎಂದು ಆದೇಶ ನೀಡಿತು.