ಬೆಂಗಳೂರಿನಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಅವರು, ಹೈಕಮಾಂಡ್ ನಾಯಕರು ಒಳ್ಳೆಯ ತೀರ್ಮಾನ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಉತ್ತಮ ಕಾರ್ಯ ಮಾಡುತ್ತಾರೆ. ಈಗ ಡಿಸಿಎಂ ಆಗಿ ಡಿಕೆಶಿ ಮಾತ್ರ ಪ್ರಮಾಣ ವಚನ ತೆಗೆದುಕೊಳ್ಳುತ್ತಾರೆ ಎಂಬ ಮಾಹಿತಿ ಬಂದಿದೆ. ನಾನು ಡಿಸಿಎಂ ಸ್ಥಾನದ ಆಂಕಾಕ್ಷಿಯಲ್ಲ. ಆದರೆ ಬೇರೆ ಸಮುದಾಯದವರಿಗೆ ಡಿಸಿಎಂ ಸ್ಥಾನ ನೀಡಿದರೆ ನಾನು ಸಹ ಬೇಡಿಕೆ ಇಡುತ್ತೇನೆ. ಅಂತಿಮವಾಗಿ ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಹೇಳಿದರು. ನಾನು ಸಚಿವ ಸ್ಥಾನದ ಆಕಾಂಕ್ಷಿ. ಜನರಿಗೆ ಹತ್ತಿರ ಇರುವ, ಜನರ ಬಳಿ ಹೋಗುವ ಖಾತೆ ಕೇಳುತ್ತೇನೆ. 15 ಖಾತೆಗಳು ಜನರಿಗೆ ನೇರವಾಗಿ ಹತ್ತಿರ ಇದೆ. ಇದರಲ್ಲಿ ಯಾವುದಾದರೂ ಖಾತೆ ಕೊಡಲಿ. ನಮ್ಮ ಬೆಳಗಾವಿ ಜಿಲ್ಲೆಗೆ ಕನಿಷ್ಠ ಮೂರು ಸಚಿವ ಸ್ಥಾನ ಕೊಡಬೇಕು. ನಮ್ಮ ಜಿಲ್ಲೆಯಲ್ಲಿ 11 ಸ್ಥಾನ ಗೆದ್ದಿದ್ದೇವೆ. 3 ಸಚಿವ ಸ್ಥಾನ ಕೊಡಬೇಕು. ಗ್ಯಾರಂಟಿ ಸ್ಕೀಮ್‌ಗಳನ್ನು ಘೋಷಣೆ ಮಾಡಿದ್ದೇವೆ. ಅದನ್ನು ಜಾರಿ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳಿಗೆ ಮಾನದಂಡ ಹಾಕುತ್ತೇವೆ. ಗ್ಯಾರಂಟಿ ಸ್ಕೀಮ್‌ಗಳ ಮಾನದಂಡ ಬಡವರಿಗೆ ಅನ್ವಯಿಸುವುದಿಲ್ಲ. ಆದರೆ ಶ್ರೀಮಂತರಿಗೆ ಮಾನದಂಡ ಹಾಕುತ್ತೇವೆ. ಬಡವರಿಗೆ ಯಾವುದೇ ಮಾನದಂಡ ಇಲ್ಲ. ಬಿಜೆಪಿಯವರು ಸಿಎಂ ಆಯ್ಕೆ ಮಾಡಲು 11 ದಿನ ತೆಗೆದುಕೊಂಡರು. ನಮ್ಮಲ್ಲಿ ಐದೇ ದಿನಕ್ಕೆ ಮುಗಿದಿದೆ ಎಂದು ಬಿಜೆಪಿಗೆ ಟಾಂಗ್ ನೀಡಿದರು.