ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ಹಾಗೂ ಯುಎಇ ಪ್ರವಾಸ ಆರಂಭಗೊಂಡಿದೆ. ಮೋದಿ ಭೇಟಿಯಲ್ಲಿ ಹಲವು ದ್ವಿಪಕ್ಷೀಯ ಒಪ್ಪಂದಗಳು, ರಕ್ಷಣಾ ಒಪ್ಪಂದ, ವ್ಯಾಪರ ವ್ಯಹಾರ ಸೇರಿದಂತೆ ಹಲವು ಮಹತ್ವದ ಮಾತುಕತೆಗಳು ನಡೆಯಲಿದೆ. ಈ ಭೇಟಿ ಬೆನ್ನಲ್ಲೇ ಮೋದಿ, ವಿಶೇಷ ಸಂದರ್ಶನದಲ್ಲಿ ಭಾರತ ಜಾಗತಿಕವಾಗಿ ಪ್ರಕಾಶಿಸುತ್ತಿರುವ ಕುರಿತು ಹಲವು ಮಾಹಿತಿಗಳನ್ನು ನೀಡಿದ್ದಾರೆ. ಇದೇ ವೇಳೆ ಭಾರತ ಯಾವತ್ತೂ ವಿಶ್ವ ನಾಯಕನ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿಲ್ಲ. ಭಾರತ ಯಾವತ್ತೂ ಸಾಮೂಹಿಕ ನಾಯಕತ್ವ, ಸಾಮೂಹಿಕ ಶಕ್ತಿ ಮೇಲೆ ನಂಬಿಕೆ ಇಟ್ಟಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಜೊತಗೆ ತಂತ್ರಜ್ಞಾನದ ಬಳಕೆ, ಆರ್ಥಿಕತೆಯಲ್ಲಿ ಪ್ರಗತಿಯಿಂದ ಜಾಗತಿಕ ಮಟ್ಟದ ಸವಾಲುಗಳನ್ನು ಮೆಟ್ಟಿನಿಲ್ಲಲು ಭಾರತ ಶಕ್ತವಾಗಿದೆ. ಗ್ಲೋಬಲ್ ಸೌತ್ ರಾಷ್ಟ್ರಗಳ ಅಭಿವೃದ್ಧಿಯಲ್ಲಿ ಭಾರತ ಸೇತುವೆಯಾಗಿದೆ. ಹೀಗಾಗಿ ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಭಾರತವೇ ಆಧಾರ. ಗ್ಲೋಬಲ್ ಸೌತ್ ಅಭಿವೃದ್ಧಿಯಲ್ಲಿ ಭಾರತವೇ ಆಧಾರ. ಭಾರತದ ಪ್ರಯತ್ನದಿಂದ ಉತ್ತರ ಹಾಗೂ ದಕ್ಷಿಣ ಜಾಗತಿಕ ರಾಷ್ಟ್ರಗಳ ಸಂಪರ್ಕ ಮತ್ತಷ್ಟು ಬಲಗೊಳ್ಳಲಿದೆ. ವಸುದೈವ ಕುಟುಂಬ ತತ್ವದಡಿ ಭಾರತ ಕಾರ್ಯನಿರ್ವಹಿಸುತ್ತದೆ ಎಂದು ಮೋದಿ ಹೇಳಿದ್ದಾರೆ.