ಚಂದ್ರನ ಅಂಗಳಕ್ಕೆ ರಷ್ಯಾ ಕಳುಹಿಸಿದ್ದ ಲೂನಾ-25 ಬಾಹ್ಯಾಕಾಶ ನೌಕೆಯು ಚಂದ್ರ ಮೇಲ್ಮೈಗೆ ಅಪ್ಪಳಿಸಿ ಪತನಗೊಂಡಿತು. ಈ ಕಾರ್ಯಾಚರಣೆಯಲ್ಲಿ ಕೆಲಸ ಮಾಡಿದ್ದ ಪ್ರಮುಖ ಭೌತಶಾಸ್ತ್ರಜ್ಞ ಮತ್ತು ಖಗೋಳಶಾಸ್ತ್ರರೊಬ್ಬರು ಮಿಷನ್‌ವಿಫಲವಾದ ಸುದ್ದಿ ಕೇಳಿ ಅನಾರೋಗ್ಯಕ್ಕೀಡಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ನಾನು ನಿಗಾ ಘಟಕದಲ್ಲಿದ್ದೇನೆ. ಹೀಗಾದಾಗ ಚಿಂತಿಸದಿರಲು ಹೇಗೆ ಸಾಧ್ಯ ಇದು ಜೀವನದ ವಿಷಯವೂ ಹೌದು. ತುಂಬಾ ಕಷ್ಟಕರವಾಗಿದೆ. ಚಂದ್ರನ ಮೇಲೆ ನೌಕೆಯನ್ನು ಇಳಿಸಲು ಸಾಧ್ಯವಾಗದಿರುವುದು ಬೇಸರ ತರಿಸಿದೆ ಎಂದು ವಿಜ್ಞಾನಿ ಮಾರೊವ್ ಮಾಸ್ಕೋದ ಕ್ರೆಮ್ಲಿನ್‌ಗೆ ಸಮೀಪದಲ್ಲಿರುವ ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆಯಲ್ಲಿ ಮಾತನಾಡಿದ್ದಾರೆ.