ಬಿಜೆಪಿ ಅವಧಿಯ ಪಠ್ಯ ಪರಿಷ್ಕರಣೆ ವಿಚಾರ ಕುರಿತು ಮಾತನಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಚಕ್ರವರ್ತಿ ಸೂಲೆಬೆಲೆ ಬರೆದಿರುವ ಪಠ್ಯ ತೆಗೆಯುತ್ತೇವೆ. ನಾನು ಚಕ್ರವರ್ತಿ ಸೂಲೆಬೆಲೆ ಬರೆದಿರುವ ಪಠ್ಯವನ್ನು ಓದಿಲ್ಲ. ಬಾಡಿಗೆ ಭಾಷಣಕಾರರ ಲೇಖನ, ಸಾಹಿತ್ಯವನ್ನು ನಮ್ಮ ಮಕ್ಕಳು ಯಾಕೆ ಓದಬೇಕು? ಸೂಲಿಬೆಲೆ ಬರೆದಿರುವ ಪಠ್ಯವನ್ನು ನಮ್ಮ ಮಕ್ಕಳು ಓದುವುದು ಬೇಡ. ಯಾವ ಆಧಾರದಲ್ಲಿ ಸೂಲೆಬೆಲೆ ಬರೆದಿರುವ ಲೇಖನವನ್ನು ಪಾಠ ಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದಾರೆ ಅವನು ಯಾವ ಪಿಹೆಚ್‌ಡಿ ಮಾಡಿದ್ದಾರೆ. ಕರ್ನಾಟಕ ಸಾಹಿತ್ಯಕ್ಕ ಅಷ್ಟು ಬರಬಂದಿದೆಯಾ? ಈ ಪಾಠ ನಮ್ಮ ಮಕ್ಕಳು ಕಲಿತರೆ ನಮ್ಮ ಮಕ್ಕಳಭವಿಷ್ಯ ಏನಾಗಬೇಕು? ಎಂದು ಯೋಜಿಸಿದ್ದೀರಾ ನಿಮ್ಮ ಮಕ್ಕಳು ವಾಟ್ಸ್ ಅಪ್ ಯೂನಿವರ್ಸಿಟಿ ಓದಬೇಕಾ..? ಒಳ್ಳೆ ಯೂನಿವರ್ಸಿಟಿ ಓದಬೇಕಾ? ಎಂದು ಪ್ರಶ್ನಿಸಿ. ಬಿಜೆಪಿ ವಿರುದ್ದ ಖರ್ಗೆ ಹರಿಹಾಯ್ದಿದ್ದಾರೆ.