ಗುರುವಾರ ಕುಟಂಬ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದು ಆಗಮಿಸಿದ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ.ಸುಧಾಕರ್, ಚಿಕ್ಕಪ್ಯಾಯಲಗುರ್ಕಿ ಗ್ರಾಮದ ಮನೆ ದೇವರು ಚನ್ನಕೇಶವಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿ. ನಂತರ ಚಿಕ್ಕಬಳ್ಳಾಪುರ ನಗರದ ಉಪವಿಭಾಗಾಧಿಕಾರಿಗಳ ಕಚೇರಿಗೆ ಆಗಮಿಸಿ ಚುನಾವಣಾಧಿಕಾರಿ ಸಂತೋಷ್ ಕುಮಾರ್‌ಗೆ ನಾಮಪತ್ರ ಸಲ್ಲಿಸಿದರು.ಸಚಿವ ಸುಧಾಕರ್‌ಗೆ ಪತ್ನಿ ಪ್ರೀತಿ, ತಂದೆ ಕೇಶವರೆಡ್ಡಿ, ಸಹೋದರಿ ಅಶ್ವಿನಿ, ಹಾಗೂ ಮಾವ ಆನಂದ್ ಸಾಥ್ ನೀಡಿದ್ದಾರೆ. ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಸುಧಾಕರ್, ಗುರುವಾರ ಗುರುವನ್ನು ನಂಬುವ ನಾನು ತಿರುಪತಿ ತಿಮ್ಮಪ್ಪನ ಪರಮ ಭಕ್ತ. ಹಾಗಾಗಿ ಇಂದು ದೇವರ ದರ್ಶನ ಪಡೆದು ಆಗಮಿಸಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಪಕ್ಷ ಬಿ ಫಾರಂ ನೀಡಿದ್ದು, ಅದನ್ನು ಪಡೆಯಲು ಸಾಧ್ಯವಾಗಲಿಲ್ಲ. ಹಾಗೆ ಬಂದು ಇಂದು ಸಾಂಕೇತಿಕವಾಗಿ ನಾಮಿನೇಷನ್ ಮಾಡಿದ್ದೇನೆ ಎಂದರು.