ಚೀನಾದಲ್ಲಿ ಕೊರೊನಾ ಅರ್ಭಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ- ಆರೋಗ್ಯ ಕೇಂದ್ರಗಳು ಸಾಕಾಗುತ್ತಿಲ್ಲ ಆಸ್ಪತ್ರೆಗಳು ಫುಲ್

ಚೀನಾದಲ್ಲಿ ಈ ಹಿಂದೆ ಕೊರೊನಾ ಕಡಿಮೆ ಆದ ಬಳಿಕ ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಲಾಗಿತ್ತು. ಆದರೀಗ ಚೀನಾದಲ್ಲಿ ದಟ್ಟ ಮಂಜು ಚಳಿ ಆವರಿಸುತ್ತಿದ್ದಂತೆ ಮತ್ತೆ ಕೊರೊನಾ ಅರ್ಭಟ ಹೆಚ್ಚಾಗಲು ಶುರುವಾಗಿದೆ. ಚೈನೀಸ್ ನಗರಗಳು ಪ್ರಸ್ತುತ ಹೆಚ್ಚು ಹರಡುವ ಓಮಿಕ್ರಾನ್ ತಳಿಗಳಾದ BA.5.2 ಮತ್ತು BF.7ನಿಂದ ಹೆಚ್ಚು ಹಾನಿಗೊಳಗಾಗಿವೆ ಎಂದು ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಇದು ಕಾಡ್ಗಿಚ್ಚಿನಂತೆ ಹರಡುತ್ತಿದೆ. ಒಂದು ಅಂದಾಜಿನ ಪ್ರಕಾರ, ನಗರದ ಜನಸಂಖ್ಯೆಯ 70 ಪ್ರತಿಶತದಷ್ಟು ಜನರು ವೈರಸ್‌ವಿರುದ್ಧ ಹೋರಾಡುತ್ತಿದ್ದಾರೆ. ಇದು ಲಕ್ಷಾಂತರ ಜನರನ್ನು ತಮ್ಮ ಮನೆಗಳಲ್ಲೇ ಇರಿಸುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ 90 ಪ್ರತಿಶತದಷ್ಟು ಜನ ಸೋಂಕಿಗೆ ಒಳಗಾಗಬಹುದು.ಚೀನಾದಾದ್ಯಂತ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಕೋವಿಡ್‌ನಿಂದ ಸಾವುಗಳು ಹೆಚ್ಚಾಗಬಹುದು ಎಂದು ಆರೋಗ್ಯ ಅರ್ಥಶಾಸ್ತ್ರಜ್ಞ, ಫೀಗಲ್-ಡಿಂಗ್ ಅವರು ಎಚ್ಚರಿಸಿದ್ದಾರೆ. ಮತ್ತೊಂದೆಡೆ ರೋಗಿಗಳ ಸಂಖ್ಯೆ ಎಷ್ಟು ಹೆಚ್ಚಾಗುತ್ತಿದೆ ಅಂದರೆ ಆರೋಗ್ಯ ಕೇಂದ್ರಗಳು ಸಾಕಾಗುತ್ತಿಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *