ಯುಎಸ್ ಇಂಡೋ-ಪೆಸಿಫಿಕ್ ಕಮಾಂಡರ್‌ಪ್ರಕಾರ, ಡಿಸೆಂಬರ್21ರಂದು ಆರ್‌ಸಿ -135 ವಿಮಾನವನ್ನು ಯುಎಸ್ ಏರ್ ಫೋರ್ಸ್ ಹಾರಿಸುತ್ತಿದ್ದ ಸಂದರ್ಭದಲ್ಲಿ ಚೀನಾದ ಜೆ -11 ಫೈಟರ್ ಜೆಟ್‌ಬಂದಿದೆ. ಇಂತಹ ಅಸುರಕ್ಷಿತ ನಡೆಯನ್ನು ಪ್ರದರ್ಶಿಸಿದ ಚೀನಾ ವಿರುದ್ಧ ಯುಎಸ್‌ಕಮಾಂಡರ್‌ಹರಿಹಾಯ್ದಿದ್ದಾರೆ. ಈ ಘಟನೆಯ ವಿಡಿಯೊ ಕ್ಲಿಪ್ ಅನ್ನು ಸಹ ಯುಎಸ್‌ಬಿಡುಗಡೆ ಮಾಡಿದೆ.
ಚೀನಾದ ಜೆಟ್ ಫೈಟರ್ ಯುಎಸ್‌ನ ದೊಡ್ಡ ಕಣ್ಗಾವಲು ವಿಮಾನದ ಕೆಲವೇ ಕೆಲ ಮೀಟರ್‌ಗಳಷ್ಟು ದೂರದಲ್ಲಿ ಹಾರುವುದನ್ನು ವಿಡಿಯೋದ ತುಣುಕು ತೋರಿಸುತ್ತದೆ. ಅಂತರಾಷ್ಟ್ರೀಯ ವಾಯುಪ್ರದೇಶದಲ್ಲಿ ರೂಢಿಗತ ಕಾರ್ಯಾಚರಣೆಗಳನ್ನು ನಡೆಸುತ್ತಿರುವಾಗ ತನ್ನ ವಿಮಾನವು ‘ಕಾನೂನುಬದ್ಧವಾಗಿ” ಹಾರುತ್ತಿದೆ ಎಂದು ಯುಎಸ್‌ಸ್ಪಷ್ಟಪಡಿಸಿದೆ.