ಚೀನಾದಲ್ಲಿ ಒಂದು ತಿಂಗಳು ಕಾಲ ನಡೆಯುವ ಹೊಸ ವರ್ಷಾಚರಣೆ ಜನವರಿ 21ರಿಂದ ಆರಂಭವಾಗಲಿದ್ದು, ದೇಶದಲ್ಲಿ ಮತ್ತೆ ಕೋವಿಡ್‌ಸೋಂಕು ಸ್ಫೋಟಗೊಳ್ಳುವ ಆತಂಕ ಎದುರಾಗಿದೆ. ನಿತ್ಯ ಗರಿಷ್ಠ 36,000 ಜನರು ಸಾಯಬಹುದು ಎಂದು ಅಧ್ಯಯನ ವರದಿಯೊಂದು ಎಚ್ಚರಿಕೆ ನೀಡಿದೆ. ಕೋವಿಡ್‌ವಿಷಯದಲ್ಲಿ ಕಳೆದ 3 ವರ್ಷಗಳಿಂದ ಕಟ್ಟುನಿಟ್ಟಾಗಿ ಜಾರಿ ಮಾಡಿದ್ದ ನೀತಿಯನ್ನು ಚೀನಾ ಸರ್ಕಾರ ಪೂರ್ಣವಾಗಿ ಕೈಬಿಟ್ಟಿದೆ.ಸೋಂಕು ಮತ್ತು ಸಾವಿನ ವಿಷಯದಲ್ಲಿ 3 ವರ್ಷಗಳಿಂದಲೂ ರಹಸ್ಯ ಕಾಪಾಡಿಕೊಂಡಿದ್ದ ಚೀನಾ 3 ವರ್ಷಗಳಲ್ಲಿ ಕೇವಲ 1 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆ ಮತ್ತು 5500 ಜನರು ಮೃತಪಟ್ಟಿದ್ದಾರೆ ಎಂದೇ ಮಾಹಿತಿ ನೀಡಿತ್ತು. ಆದರೆ ಜನವರಿ ಮೊದಲ ವಾರದಲ್ಲಿ ಆಸ್ಪತ್ರೆ ದಾಖಲಾದವರ ಪೈಕಿ 60,000 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಮೊದಲ ಬಾರಿಗೆ ಒಪ್ಪಿಕೊಳ್ಳುವ ಮೂಲಕ ದೇಶದಲ್ಲಿ ಹೊಸದಾಗಿ ಹಬ್ಬಿರುವ ಕೋವಿಡ್‌ಅಲೆಯ ಕುರಿತು ಸುಳಿವು ನೀಡಿತ್ತು.