ಚುನಾವಣಾ ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕು ಸಿದ್ದರಾಮಯ್ಯ ಅವರಿಗೆ ಇಲ್ಲ,: ಡಿಕೆಶಿ

ನಿನ್ನೆ ಕೊಪ್ಪಳದ ಮದುವೆ ಸಮಾರಂಭದ ವೇದಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸಿದ್ದರಾಮಯ್ಯ ಅವರು ಘೋಷಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್. ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಹಕ್ಕು ಸಿದ್ದರಾಮಯ್ಯ ಅವರಿಗೆ ಇಲ್ಲ, ನನಗೂ ಘೋಷಣೆ ಮಾಡುವ ಹಕ್ಕಿಲ್ಲ. ಎಐಸಿಸಿಗೆ ಮಾತ್ರ ಹಕ್ಕು ಇದೆ. ಸಿದ್ದರಾಮಯ್ಯ ಕೆಲ ಸಂದರ್ಭಗಳಲ್ಲಿ ಕಳೆದ ಸೋಲು ಕಂಡವರಿಗೆ ಎನ್‌ಕರೇಜ್ ಮಾಡಿ ಹೇಳಿರಬಹುದು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಅದನ್ನು ಬಿಟ್ಟರೆ ಮಲ್ಲಿಕಾರ್ಜುನ ಖರ್ಗೆ, ಹೈಕಮಾಂಡ್, ಅವರಿಗೆ ಘೋಷಣೆ ಮಾಡುವ ಹಕ್ಕಿದೆ. ನನಗೂ ಕೂಡ ಆ ಹಕ್ಕಿಲ್ಲ ಎಂದು ಒತ್ತಿ ಹೇಳಿದ್ದಾರೆ.

Leave a Reply

Your email address will not be published. Required fields are marked *