ಹೊಸಕೋಟೆಯಲ್ಲಿ ಅತೀ ಹೆಚ್ಚು ಮತಗಳನ್ನು ಹೊಂದಿರುವ ಸಮುದಾಯವೆಂದರೆ ಅದು ಒಕ್ಕಲಿಗ ಸಮುದಾಯ. ಈ ಸಮುದಾಯ 45 ಸಾವಿರ ಮತಗಳನ್ನು ಹೊಂದಿದೆ. ಹೀಗಾಗಿ ಈ ಮತಗಳನ್ನು ಗಟ್ಟಿಗೊಳಿಸುವ ಸಲುವಾಗಿ ಶಾಸಕ ಶರತ್ ಬಚ್ಚೇಗೌಡ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.ಶಾಸಕ ಶರತ್ ಒಕ್ಕಲಿಗರ ಸಂಘಕ್ಕೆ 6 ಕೋಟಿ ರೂ. ಮೌಲ್ಯದ ಜಮೀನನ್ನು ಗಿಫ್ಟ್ ರೂಪದಲ್ಲಿ ನೀಡಿದ್ದಾರೆ. ಕಳೆದ ಕೆಂಪೇಗೌಡ ಜಯಂತಿಯಲ್ಲಿ ಜಮೀನು ಕೊಡಿಸುವುದಾಗಿ ಶಾಸಕ ಶರತ್ ಭರವಸೆ ನೀಡಿದ್ದರು. ಇದೀಗ ನುಡಿದ ಮಾತಿನಂತೆ ಚುನಾವಣೆ ಸಂದರ್ಭದಲ್ಲಿ ಹೊಸಕೋಟೆ ತಾಲೂಕಿನ ಅರಳೆಮಾಕನಹಳ್ಳಿ ಬಳಿ 3 ಎಕರೆ 10 ಗುಂಟೆ ಜಮೀನನ್ನು ಒಕ್ಕಲಿಗ ಸಮುದಾಯ ಸಂಘದ ಹೆಸರಿಗೆ ಬರೆದು ಕೊಟ್ಟಿದ್ದಾರೆ. ದಾನ ಮಾಡಿರುವ ಜಮೀನಿನಲ್ಲಿ ಶಾಲಾ ಕಾಲೇಜುಗಳನ್ನು ನಿರ್ಮಿಸಿ ಎಲ್ಲಾ ಸಮುದಾಯದ ಬಡವರಿಗೆ ಅನುಕೂಲ ಮಾಡಿಕೊಡುವುದಾಗಿ ಹೇಳಿಕೆಯನ್ನು ನೀಡಿದ್ದಾರೆ.