ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಚುನಾವಣೆ ನೀತಿ ಸಂಹಿತೆ ಜಾರಿಯಾಗ್ತಿದೆ, ನನ್ನೆಲ್ಲ ಪ್ರವಾಸ ರದ್ದು ಮಾಡಿದ್ದೇನೆ. ಇನ್ನು ಏನಿದ್ರೂ ನಾನು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇನೆ. ಪಕ್ಷದ ಚಟುವಟಿಕೆಯಿಂದ ನಡೆಸುವ ರ್ಯಾಲಿಗಳಲ್ಲಿ, ಪ್ರಚಾರಗಳಲ್ಲಿ ಭಾಗವಹಿಸುತ್ತೇನೆ ಇನ್ಮುಂದೆ ನನ್ನ ಪ್ರವಾಸಗಳನ್ನು ಪಕ್ಷ ನಿಗದಿ ಮಾಡುತ್ತೆ ಎಂದು ತಿಳಿಸಿದರು. ಕಳೆದ ಸಲ 27 ರಂದು ದಿನಾಂಕ ಘೋಷಣೆ ಆಗಿತ್ತು. ನೀತಿ ಸಂಹಿತೆ ಜಾರಿಯಾಗಲಿದೆ. ಎಲ್ಲ ಪಕ್ಷಗಳಿಗೂ ನೀತಿ ಸಂಹಿತೆ ಅನ್ವಯವಾಗಲಿದೆ.ಮೋದಿ ಯವರು ಏಪ್ರಿಲ್ 9 ರಂದು ಹುಲಿಗಳ ಸಂರಕ್ಷಣಾ ದಿನಾಚರಣೆಗೆ ಮೈಸೂರಿಗೆ ಬರುತ್ತಾರೆ. ಅದು ಮೊದಲೇ ನಿಗಿದಿ ಆಗಿದ್ದ ಕಾರ್ಯಕ್ರಮವಾಗಿದೆ. ನನಗೆ ಈ ಬಾರಿ ನಮಗೆ ಬಹುಮತ ಬರುವ ವಿಶ್ವಾಸ ಇದೆ .ಡಿಕೆಶಿ ಅವರು ಎರಡನೇ ಪಟ್ಟಿ ಬಿಡುಗಡೆಗೂ ಮುನ್ನ ನಮ್ಮ ಎಲ್ಲಾ ಶಾಸಕರಿಗೆ ಕರೆ ಮಾಡುತ್ತಿದ್ದಾರೆ. ಆದರೆ ನಮ್ಮ ಪಕ್ಷದಿಂದ ಯಾರೂ ಕಾಂಗ್ರೆಸ್ ಗೆ ಹೋಗಲ್ಲ. ಇದು ಅವರ ಪರಿಸ್ಥಿತಿ ಏನು ಅಂತ ತೋರಿಸುತ್ತೆ. ಕೇಂದ್ರದಲ್ಲೂ ನಮ್ಮದೇ ಸರ್ಕಾರ ಇದೆ ಎಂದು ಹೇಳಿದರು.