ಚುನಾವಣೆ ವರ್ಷ ಅಗಿರುವುದರಿಂದ ಈ ಬಾರಿ ಜಂಟಿ ಅಧಿವೇಶನ ಬಜೆಟ್ ಅಧಿವೇಶನವನ್ನ ಏಕಕಾಲದಲ್ಲಿ ನಡೆಸಲು ಸರ್ಕಾರ ನಿರ್ಧಾರ ಫೆ.17ಕ್ಕೆ ರಾಜ್ಯ ಬಜೆಟ್‌ಮಂಡನೆ – ಜೆ.ಸಿ.ಮಾಧುಸ್ವಾಮಿ

ಸಂಪುಟ ಸಭೆಯಲ್ಲಿ ಬಜೆಟ್ ಮಂಡನೆಗೆ ದಿನಾಂಕ ನಿಗದಿ. ಕ್ಯಾಬಿನೆಟ್ ಬಳಿಕ ಸುದ್ದಿಗೋಷ್ಟಿ ನಡೆಸಿದ ಮಾಧುಸ್ವಾಮಿ ಅಧಿವೇಶನದ ಬಗ್ಗೆ ಮಾಹಿತಿ ನೀಡಿದರು. ಈ ಬಾರಿ ಜಂಟಿ ಅಧಿವೇಶನ ಫೆಬ್ರವರಿ 10 ರಂದು ಪ್ರಾರಂಭವಾಗಲಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೊಟ್ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಹಾಗೂ ಫೆಬ್ರವರಿ 17 ರಂದು ಸಿಎಂ ಬೊಮ್ಮಾಯಿ‌ಬಜೆಟ್ ಮಂಡನೆ ಮಾಡಲಿದ್ದಾರೆ. ಚುನಾವಣೆ ವರ್ಷ ಅಗಿರುವುದರಿಂದ ಈ ಬಾರಿ ಜಂಟಿ ಅಧಿವೇಶನ ಬಜೆಟ್ ಅಧಿವೇಶನವನ್ನ ಏಕಕಾಲದಲ್ಲಿ ನಡೆಸಲು ಸರ್ಕಾರ ನಿರ್ಧಾರ ಮಾಡಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *