ಛತ್ತೀಸ್‌ಗಢದಲ್ಲಿ ಮತ್ತೆ ನಕ್ಸಲರು ಅಟ್ಟಹಾಸ ಮೆರೆದಿದ್ದು, 10 ಜವಾನರು ಹುತಾತ್ಮರಾಗಿದ್ದಾರೆ, ಛತ್ತೀಸ್‌ಗಢದ ದಾಂತೆವಾಡಾ ಜಿಲ್ಲೆಯ ಅರಣ್‌ಪುರ ಬಳಿ ಗುರುವಾರ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆಸಿ ವಾಪಸ್ ಹೋಗುತ್ತಿದ್ದಾಗ ಈ ಬರ್ಬರ ಕೃತ್ಯ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 10 ಜನ ಜವಾನರು ಹಾಗೂ ಚಾಲಕ ಸೇರಿ 11 ಜನ ವಾಹನದಲ್ಲಿ ಹೋಗುತ್ತಿದ್ದಾಗ ಸಂಪೂರ್ಣ ವಾಹನವನ್ನೇ ಸ್ಪೋಟಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು, ಈ ಘಟನೆ ಬಗ್ಗೆ ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಟ್ವೀಟ್ ಮಾಡಿದ್ದು, ಮಾಹಿತಿಯು ನಮ್ಮ ಬಳಿ ಇದೆ. ಇದು ತುಂಬಾ ದುಃಖಕರವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪಗಳು. ಈ ಹೋರಾಟ ಕೊನೆಯ ಹಂತದಲ್ಲಿದೆ. ನಕ್ಸಲರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸುದ್ದಿಗೋಷ್ಠಿ ಮೂಲಕ ಮಾಹಿತಿ ನೀಡಿದ್ದಾರೆ.