ಜಗತ್ತನ್ನು ಕಾಡಲಿರುವ ಹೊಸ ಸಾಂಕ್ರಾಮಿಕ, ‘ಎಕ್ಸ್‌’ ವೈರಸ್ ಬಗ್ಗೆ ಎಲ್ಲೆಡೆ ಚರ್ಚೆ ಇಂಥ ಸಾಂಕ್ರಾಮಿಕ ಎದುರಿಸಲು ಇಡೀ ವಿಶ್ವ ಒಂದಾಗಬೇಕಿದೆ

’70 ಲಕ್ಷ ಜನರನ್ನು ಬಲಿಪಡೆದ ಕೋವಿಡ್‌ಗಿಂತಲೂ ಭೀಕರವಾಗಿರುವ ಮುಂದಿನ ಸಾಂಕ್ರಾಮಿಕ ಎದುರಿಸಲು ಇಡೀ ವಿಶ್ವ ಸನ್ನದ್ಧವಾಗಿರಬೇಕು’ ಎಂಬ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ಬೆನ್ನಲ್ಲೇ, ಜಗತ್ತನ್ನು ಮುಂದೆ ಕಾಡಲಿರುವ ಭೀಕರ ಸಾಂಕ್ರಾಮಿಕ ಯಾವುದಾಗಿರಬಹುದು ಎಂಬ ಚರ್ಚೆ ಇದೀಗ ಎಲ್ಲೆಡೆ ಆರಂಭವಾಗಿದೆ.ಯಾವುದೇ ಸಮಯದಲ್ಲಿ ವಿಶ್ವದ ಯಾವುದೇ ಮೂಲೆಯಿಂದ ಉದ್ಭವಿಸಬಹುದಾದ ‘ಎಕ್ಸ್‌’ ಸಾಂಕ್ರಾಮಿಕದ ಕುರಿತೇ ಎಲ್ಲರಲ್ಲಿ ಅತಿ ಹೆಚ್ಚು ಆತಂಕ ಮೂಡಿದೆ. ಯಾವುದೇ ಹೆಸರು ಇರದ ಸಂಭಾವ್ಯ ಸೋಂಕಿಗೆ ವಾಡಿಕೆಯಂತೆ ‘ಎಕ್ಸ್‌’ ಎಂದು ಹೆಸರಿಡಲಾಗುತ್ತದೆ. ಈ ರೀತಿಯ ಸೋಂಕು ಬರಬಹುದು ಎಂದು ಹಲವು ವರ್ಷ ಹಿಂದೆಯೇ ಅದಕ್ಕೆ ‘ಎಕ್ಸ್‌’ ಎಂದು ಹೆಸರಿಟ್ಟಿತ್ತು. ಹೀಗಾಗಿಯ ಎಕ್ಸ್‌ಸೋಂಕು ಸೇರಿದಂತೆ ಇಂಥ ಯಾವುದೇ ಸಾಂಕ್ರಾಮಿಕ ಎದುರಿಸಲು ಇಡೀ ವಿಶ್ವ ಒಂದಾಗಬೇಕಿದೆ. ನಡೆಸುವ ಸಂಶೋಧನೆಗೆ ಎಲ್ಲಾ ದೇಶಗಳು ಆರ್ಥಿಕ ನೆರವು ನೀಡಬೇಕು ಎಂದು ವೈದ್ಯಕೀಯ ತಜ್ಞರು ಕರೆ ನೀಡಿದ್ದಾರೆ.ಬಹುತೇಕ ತಜ್ಞರು ಮುಂದಿನ ಸಾಂಕ್ರಾಮಿಕವು ಕೋವಿಡ್‌ಮಾದರಿಯಲ್ಲಿ ಪ್ರಾಣಿಗಳಿಂದ ಮಾನವರಿಗೆ ಹಬ್ಬಬಹುದು ಎಂದಿದ್ದಾರೆ. ಇನ್ನು ಕೆಲವರು ಜೈವಿಕ ಭಯೋತ್ಪಾದನೆಯ ಕಾರಣ ಹೊಸ ವೈರಸ್‌ಜಗತ್ತನ್ನು ಕಾಡಬಹುದು ಎಂದಿದ್ದಾರೆ. ಇನ್ನು ಕೆಲವರು ಆಕಸ್ಮಿಕವಾಗಿ ಪ್ರಯೋಗಾಲಯದಿಂದ ಸೋರಿಕೆಯಾದ ವೈರಸ್‌ಜಗತ್ತಿಗೆ ಮಾರಕವಾಗಬಹುದು ಎಂದಿದ್ದಾರೆ. ಇನ್ನು ಕೆಲವರು ಶತಮಾನಗಳಿಂದ ಮಂಜುಗಡ್ಡೆಯಲ್ಲಿ ತಣ್ಣಗೆ ಮಲಗಿರುವ ನಿಗೂಢ ವೈರಸ್‌ಜಾಗತಿಕ ತಾಪಮಾನದ ಕಾರಣದಿಂದಾಗಿ ಮರಳಿ ಜೀವ ತಳೆದು ಜಗತ್ತನ್ನು ಆವರಿಸಬಹುದು ಎಂದು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *