ಜಗತ್ತಿಗೇ ಅಪಾಯ ಎದುರಾಗಬಹುದು ವಿಶ್ವ ಆರೋಗ್ಯ ಸಂಸ್ಥೆ ಕಳವಳ

ಸುಡಾನ್ ಅಲ್ಲಿ ತಿನ್ನಲು ಅನ್ನವಿಲ್ಲ.. ಆದರೂ ಶೋಕಿಗೆ ಗನ್ ಬೇಕು, ಬಾಂಬ್ ಬೇಕು.. ಇದು ಕಥೆಯಲ್ಲ ಸುಡಾನ್ ನಾಯಕರ ಶೋಕಿಯ ವ್ಯಥೆ. ಹೌದು, ಹೀಗೆ ಒಣ ಶೋಕಿಯಿಂದಲೇ ಸುಡಾನ್ ಸೇನೆ ಹಾಗೂ ರಾಜಕೀಯ ನಾಯಕರು ಸುಡಾನ್ ದೇಶವನ್ನ ಹಾಳು ಮಾಡಿ ವಿನಾಶದ ಅಂಚಿಗೆ ತಂದಿದ್ದಾರೆ. ಜೊತೆಗೆ ಇಡೀ ಜಗತ್ತಿಗೂ ವಿನಾಶದ ಅಪಾಯ ಎದುರಾಗುವಂತೆ ಮಾಡಿದ್ದಾರೆ.ಅಂದಹಾಗೆ ಸುಡಾನ್ ಸೇನೆ ಮತ್ತು ಅರೆಸೇನಾ ಪಡೆ ಮಧ್ಯೆ ಜಗಳ ಶುರುವಾಗಿ ಸಿಕ್ಕ ಸಿಕ್ಕ ಜಾಗವನ್ನು ನಾಶ ಮಾಡುತ್ತಾ ಸಾಗುತ್ತಿರುವುದು ಗೊತ್ತಿರುವ ವಿಚಾರ. ಅರೆಸೇನಾ ಪಡೆಯ ಪೈಕಿ ಒಬ್ಬರಿಗೆ ಲ್ಯಾಬ್ ಸಿಕ್ಕಿಬಿಟ್ಟಿದೆ. ಲ್ಯಾಬ್‌ನಲ್ಲಿ ಪೋಲಿಯೊ, ದಢಾರ, ಕಾಲರಾಗೆ ಸಂಬಂಧಿಸಿದ ಔಷಧ ಇರಿಸಲಾಗಿತ್ತು. ಆದರೆ ಲ್ಯಾಬ್‌ನಲ್ಲಿದ್ದ ಅಧಿಕಾರಿ ವರ್ಗ ಸಿಬ್ಬಂದಿಯನ್ನ ಓಡಿಸಿರುವ ದಂಗೆಕೋರರು, ಮುಂದೆ ಜಗತ್ತಿಗೇ ವಿನಾಶ ಸೃಷ್ಟಿಸುವ ಅಪಾಯ ಎದುರಾಗಿದೆ.ಇದರಿಂದ ಇಡೀ ಜಗತ್ತಿಗೇ ಅಪಾಯ ಎದುರಾಗಬಹುದು ಎಂದು ವಿಶ್ವಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *