ಜಪಾನ್‌ನಲ್ಲಿ ಭೀಕರ ಭೂಕಂಪ ಸಂಭವಿಸಿ ಎರಡು ದಿನದಲ್ಲೇ ಅಫ್ಘಾನಿಸ್ತಾನದಲ್ಲಿ 30 ನಿಮಿಷದಲ್ಲಿ ಎರಡು ಬಾರಿ ಕಂಪಿಸಿದ ಭೂಮಿ

ಜಪಾನ್‌ನಲ್ಲಿ ಭೀಕರ ಭೂಕಂಪ ಸಂಭವಿಸಿ ಎರಡು ದಿನದಲ್ಲೇ ಅಫ್ಘಾನಿಸ್ತಾನದಲ್ಲೂ ಭೂಮಿ ಕಂಪಿಸಿದೆ. ಬುಧವಾರ 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಎರಡು ಬಾರಿ ಭೂಕಂಪಗಳು ಅಫ್ಘಾನಿಸ್ತಾನದಲ್ಲಿ ಸಂಭವಿಸಿವೆ.
ಆದರೆ ಎರಡು ಭೂಕಂಪಗಳ ತೀವ್ರತೆ ಕಡಿಮೆಯಾಗಿದೆ. ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಮೊದಲ ಭೂಕಂಪವು 4.4 ರ ತೀವ್ರತೆಯನ್ನು ಹೊಂದಿತ್ತು ಮತ್ತು ಇದು ಫೈಜಾಬಾದ್‌ನಿಂದ 100 ಕಿಮೀ ಪೂರ್ವಕ್ಕೆ ಸಮಯ 12:28 ಕ್ಕೆ ಸಂಭವಿಸಿದೆ. ಇನ್ನೂ ಫೈಜಾಬಾದ್‌ನಿಂದ ಪೂರ್ವಕ್ಕೆ 126 ಕಿಮೀ ದೂರದಲ್ಲಿ ಸಮಯ 12:55ಕ್ಕೆ 4.8 ತೀವ್ರತೆಯೊಂದಿಗೆ ಎರಡನೇ ಭೂಕಂಪ ಸಂಭವಿಸಿದೆ.ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಈ ಹಿಂದೆ ಅಫ್ಘಾನಿಸ್ತಾನದಲ್ಲಿ 2023 ಡಿಸೆಂಬರ್ 12 ರಂದು ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿತ್ತು. ಅದಕ್ಕೂ ಮೊದಲು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರಬಲವಾದ 6.3 ತೀವ್ರತೆಯ ಭೂಕಂಪದಿಂದಾಗಿ ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಡಜನ್ಗಟ್ಟಲೆ ಜನರು ಪ್ರಾಣಕಳೆದುಕೊಂಡರು. ಎರಡು ದಶಕಗಳಲ್ಲಿ ದೇಶವನ್ನು ಅಪ್ಪಳಿಸಿದ ಭೀಕರ ಭೂಕಂಪಗಳಲ್ಲಿ ಸುಮಾರು 2,000 ಜನರು ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *