ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್‌ಪಾಳಯದಲ್ಲಿ ಸರ್ಕಾರ ರಚನೆಯ ಆರಂಭದಲ್ಲಿ ಹಲವು ಸವಾಲುಗಳು ಹೈಕಮಾಂಡ್‌ಗೆ ಎದುರಾಗಿದೆ. ಹಂಚಿಕೆ ಕಸರತ್ತು ಪ್ರಾರಂಭವಾಗಿದೆ. ಪ್ರಬಲ ಖಾತೆಗಾಗಿ ಘಟಾನುಘಟಿ ನಾಯಕರ ನಡುವೆ ಇದೀಗ ಪೈಪೋಟಿ ಏರ್ಪಟಿದೆ. ಸಿಎಂ ಸ್ಥಾನದ ಆಯ್ಕೆಯ ಸಂದರ್ಭದಲ್ಲಿ ಎರಡು ಪ್ರಬಲ ಖಾತೆಗಾಗಿ ಡಿ ಕೆ ಶಿವಕುಮಾರ್‌ಬೇಡಿಕೆ ಇಟ್ಟಿದ್ದರು ಎನ್ನಲಾಗಿತ್ತು. ಜಲಸಂಪನ್ಮೂಲ ಖಾತೆಗಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಎಂ.ಬಿ. ಪಾಟೀಲ್ ಬೇಡಿಕೆ ಇಟ್ಟಿದ್ದಾರೆ. ಈ ಇಬ್ಬರೂ ನಾಯಕರು ನನಗೆ ಜನಸಂಪನ್ಮೂಲ ಖಾತೆಯೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ, ಉತ್ತರ ಕರ್ನಾಟಕ ಭಾಗದಲ್ಲಿ ನೀರಾವರಿ ಯೋಜನೆಗಳು ಹೆಚ್ಚಿರುವುದರಿಂದ ನನಗೆ ಜಲಸಂಪನ್ಮೂಲ ಖಾತೆ ಬೇಕೇ ಬೇಕು ಎಂದು ನೂತನ ಸಚಿವ ಎಂ.ಬಿ ಪಾಟೀಲ್ ಪಟ್ಟು ಹಿಡಿದಿದ್ದಾರೆ.ಇತ್ತ, ಮೇಕೆದಾಟು ಯೋಜನೆಯನ್ನು ಜಾರಿ ಮಾಡಬೇಕಾದ ಅಗತ್ಯವಿದೆ ಎಂದಿರುವ ನೂತನ ಡಿಸಿಎಂ ಡಿಕೆ ಶಿವಕುಮಾರ್‌ಈಗಾಗಲೇ ಮೇಕೆದಾಟು ಪಾದಯಾತ್ರೆಯನ್ನ ನಡೆಸಿದ್ದು, ಮೇಕೆದಾಟು ಯೋಜನೆ ಜಾರಿಗೆ ಪಣ್ಣತೊಟ್ಟಿದ್ದು, ಜಲಸಂಪನ್ಮೂಲ ಖಾತೆ ಮೇಲೆ ಕಣ್ಣಿಟ್ಟಿದ್ದಾರೆ, ಲಿಂಗಾಯತ ನಾಯಕರಾಗಿರುವ ಎಂ ಬಿ ಪಾಟೀಲ್‌ಹಾಗೂ ಒಕ್ಕಲಿಗ ನಾಯಕರಾಗಿರುವ ಡಿ ಕೆ ಶಿವಕುಮಾರ್‌ನಡುವೆ ಜನಸಂಪನ್ಮೂಲ ಖಾತೆಗಾಗಿ ಪೈಪೋಟಿ ಏರ್ಪಟ್ಟಿದ್ದು, ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಗೆ ಇಬ್ಬರ ನಾಯಕರ ಜಟಾಪಟಿಯೇ ದೊಡ್ಡ ಟೆನ್ಷನ್‌ತಂದಿದೆ ಎನ್ನಲಾಗಿದೆ.