ಜಾತ್ಯತೀತ ಕಾನೂನು ಉಲ್ಲಂಘನೆ ಆರೋಪ ಫ್ರಾನ್ಸ್‌ನ ಶಾಲೆಗಳಲ್ಲಿ ಮುಸ್ಲಿಂ ಉಡುಪುಗಳನ್ನು ನಿಷೇಧಿಸಿದ ಫ್ರಾನ್ಸ್‌

ಕೆಲವು ಮುಸ್ಲಿಂ ಮಹಿಳೆಯರು ಧರಿಸುವ ಅಬಯಾ ಉಡುಪುಗಳನ್ನು ಶಾಲೆಯಲ್ಲಿ ಧರಿಸುವುದನ್ನು ಫ್ರೆಂಚ್ ಅಧಿಕಾರಿಗಳು ನಿಷೇಧಿಸಲಿದ್ದಾರೆ ಎಂದು ಫ್ರಾನ್ಸ್‌ಶಿಕ್ಷಣ ಸಚಿವ ಗೇಬ್ರಿಯಲ್ ಅಟ್ಟಲ್ ಹೇಳಿದರು. ಈ ಉಡುಪು ಫ್ರಾನ್ಸ್‌ನ ಶಿಕ್ಷಣದಲ್ಲಿ ಕಟ್ಟುನಿಟ್ಟಾದ ಜಾತ್ಯತೀತ ಕಾನೂನುಗಳನ್ನು ಉಲ್ಲಂಘಿಸಿದೆ ಎಂದೂ ಅವರು ವಾದಿಸಿದರು. ಈ ಹಿಂದೆಯೇ ಫ್ರಾನ್ಸ್‌ನಲ್ಲಿ ಹಿಜಾಬ್‌ಸೇರಿ ಹಲವು ಮುಸ್ಲಿಂ ಉಡುಪುಗಳನ್ನು ನಿಷೇಧಿಸಲಾಗಿದೆ. “ಇನ್ನು ಮುಂದೆ ಶಾಲೆಯಲ್ಲಿ ಅಬಯಾ ಧರಿಸಲು ಸಾಧ್ಯವಾಗುವುದಿಲ್ಲ” ಎಂದು ಫ್ರಾನ್ಸ್ ಶಿಕ್ಷಣ ಸಚಿವ ಗೇಬ್ರಿಯಲ್ ಅಟ್ಟಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ. ಸೆಪ್ಟೆಂಬರ್ 4 ರಿಂದ ರಾಷ್ಟ್ರವ್ಯಾಪಿ ತರಗತಿಗಳಿಗೆ ಹಿಂತಿರುಗುವ ಮೊದಲು ಶಾಲಾ ಮುಖ್ಯಸ್ಥರಿಗೆ “ರಾಷ್ಟ್ರೀಯ ಮಟ್ಟದಲ್ಲಿ ಸ್ಪಷ್ಟ ನಿಯಮಗಳನ್ನು” ನೀಡುವುದಾಗಿಯೂ ಹೇಳಿದರು.

Leave a Reply

Your email address will not be published. Required fields are marked *