ಜಿ20 ಶೃಂಗಸಭೆಯಲ್ಲಿ ಭಾರತ ತನ್ನ ಡಿಜಿಟಲ್ ಸಾಮಥ್ರ್ಯವನ್ನು ಜಗತ್ತಿಗೆ ಪ್ರದರ್ಶಿಸಲು ಸಜ್ಜಾಗಿದೆ

ಜಿ20 ಶೃಂಗಸಭೆಯಲ್ಲಿ ಭಾರತ ತನ್ನ ಡಿಜಿಟಲ್ ಸಾಮಥ್ರ್ಯವನ್ನು ಜಗತ್ತಿಗೆ ಪ್ರದರ್ಶಿಸಲು ಸಜ್ಜಾಗಿದೆ. ಸುಮಾರು 1,000 ವಿದೇಶಿ ಪ್ರತಿನಿಧಿಗಳಿಗೆ ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ ತಂತ್ರಜ್ಞಾನದ ಅನುಭವ ನೀಡಲು ತಯಾರಿ ಮಾಡಿಕೊಂಡಿದೆ. ಯುಪಿಐ ವಹಿವಾಟುಗಳನ್ನು ಮಾಡಲು ಬಯಸುವ ವಿದೇಶಿ ಪ್ರತಿನಿಧಿಗಳಿಗೆ ಅವರ ಯುಪಿಐ ವ್ಯಾಲೆಟ್‍ಗಳಲ್ಲಿ 500-1,000 ರೂ. ನೀಡಲಾಗುತ್ತಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ಇದರ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ಸರ್ಕಾರ ಸುಮಾರು 10 ಲಕ್ಷ ರೂ.ಗಳನ್ನು ಮೀಸಲಿಟ್ಟಿದೆ ಶ್ರೀಲಂಕಾ, ಫ್ರಾನ್ಸ್, ಯುಎಇ ಮತ್ತು ಸಿಂಗಾಪುರದಂತಹ ದೇಶಗಳು ಫಿನ್‍ಟೆಕ್ ಮತ್ತು ಪಾವತಿ ಪರಿಹಾರಗಳಲ್ಲಿ ಭಾರತದೊಂದಿಗೆ ಪಾಲುದಾರಿಕೆ ಹೊಂದಿವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವರ್ಷದ ಆರಂಭದಲ್ಲಿ ಏಪ್ರಿಲ್‍ನಲ್ಲಿ ಜಿ20 ರಾಷ್ಟ್ರಗಳಿಂದ ಒಳಬರುವ ಪ್ರಯಾಣಿಕರಿಗೆ ಯುಪಿಐ ಆಧಾರಿತ ಪಾವತಿಗಳನ್ನು ಪರಿಚಯಿಸಿತು.ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *