ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್70ನೇ ವರ್ಷಕ್ಕೆ ಕಾಲಿಟ್ಟರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದರು. ‘ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಪಕ್ಷದ ಅಧ್ಯಕ್ಷ ಎಂಕೆ ಸ್ಟ್ಯಾಲಿನ್ಜೀ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು’ ಎಂದು ಮಲ್ಲಿಕಾರ್ಜುನ ಖರ್ಗೆ ಬುಧವಾರ ಟ್ವೀಟ್ಮಾಡಿದ್ದರು. ಈ ಟ್ವೀಟ್ಗೆ ಎಂಕೆ ಸ್ಟ್ಯಾಲಿನ್ಕೂಡ ಪ್ರತಿಕ್ರಿಯೆ ನೀಡಿದ್ದರು. ‘ಖರ್ಗೆ ಅವರೇ, ನಿಮ್ಮ ಆತ್ಮೀಯ ಹಾರೈಕೆಗಳಿಗೆ ಧನ್ಯವಾದ’ ಎಂದು ಅವರು ಬರೆದಿದ್ದರು. ಆ ಮೂಲಕ ಹಿಂದಿ ಭಾಷಿಕರು ಇತರರಿಗೆ ಶುಭಾಶಯಗಳನ್ನು ತಿಳಿಸುವಾಗ ಹಾಗೂ ಸಂಬೋಧಿಸುವಾಗ ‘ಜೀ..’ ಎಂದು ಹೇಳುವ ಸಂಸ್ಕೃತಿಯನ್ನು ಬಿಟ್ಟುಬಿಡುವಂತೆ ಮಾರ್ಮಿಕವಾಗಿ ಸಲಹೆ ನೀಡಿದ್ದಾರೆ. ಎಂಕೆ ಸ್ಟ್ಯಾಲಿನ್ಅವರನ್ನು ‘ಜೀ’ ಎಂದು ಕರೆದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸ್ವತಃ ಸ್ಟ್ಯಾಲಿನ್ಕನ್ನಡ ಭಾಷೆಯನ್ನು ನೆನಪಿಸಿ, ಕನ್ನಡ ಪಾಠ ಮಾಡಿದ್ದಾರೆ.