ಟರ್ಕಿ ಮತ್ತು ಸಿರಿಯಾದಲ್ಲಿ ತೀವ್ರ ಭೂಕಂಪದಿಂದಾಗಿ 47 ಸಾವಿರಕ್ಕೂ ಹೆಚ್ಚು ಮೃತಪಟ್ಟಿದ್ದಾರೆ. ಲಕ್ಷಾಂತರ ಮನೆಗಳು ಹಾನಿಗೊಳಗಾಗಿ ಜನರು ಬೀದಿಗೆ ಬಂದಿದ್ದಾರೆ. ಇನ್ನೂ ಭೂಕಂಪದಿಂದಾಗಿ ಈ ಪ್ರದೇಶವು ಧ್ವಂಸಗೊಂಡ ಕೇವಲ ಎರಡು ವಾರದ ನಂತರ ಸೋಮವಾರ ರಾತ್ರಿ ಮತ್ತೊಂದು ಭೂಕಂಪವು ಟರ್ಕಿ ಮತ್ತು ಸಿರಿಯಾದ ಗಡಿ ಪ್ರದೇಶದಲ್ಲಿ ಎರಡು ಕಿಮೀ ಆಳದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪ ಕೇಂದ್ರ ತಿಳಿಸಿದೆ. ಟರ್ಕಿ ಹಾಗೂ ಸಿರಿಯಾ ಭಾಗದಲ್ಲಿ ಸಂಭವಿಸಿದ ಎರಡನೇ ಭೂಕಂಪದ ತೀವ್ರತೆಗೆ ಈಜಿಪ್ಟಿ ಹಾಗೂ ಲೆಬೆನಾನ್‌ನಲ್ಲಿ ಭೂಮಿ ಲಘುವಾಗಿ ಕಂಪಿಸಿದ ಅನುಭವಾಗಿದೆ. ಇದೀಗ ರಕ್ಷಣಾ ತಂಡಗಳು ಹೊಸದಾಗಿ ಭೂಕಂಪ ಸಂಭವಿಸಿದ ಸ್ಥಳಕ್ಕೆ ಧಾವಿಸಿದೆ.ಇನ್ನೂ ಟರ್ಕಿಯ ಅಂಟಾಕ್ಯಾ ನಗರದಲ್ಲಿ ಭೂಕಂಪನ ಸಂಭವಿಸಿದಾಗ ಪ್ರತ್ಯಕ್ಷದರ್ಶಿಯಾಗಿದ್ದ ಮುನಾ ಅಲ್ ಒಮರ್ ಎಂಬಾತ ನಾನು ಸೆಂಟ್ರಲ್ ಅಂಟಾಕ್ಯಾದಲ್ಲಿನ ಉದ್ಯಾನವನದ ಟೆಂಟ್‌ನಲ್ಲಿದ್ದೆ ಭೂಮಿಯು ನನ್ನ ಕಾಲುಗಳ ಕೆಳಗೆ ತೆರೆದುಕೊಳಂಡಿತು, ನಮ್ಮ ಅಕ್ಕಪಕ್ಕದಲ್ಲಿದ್ದ ಕಟ್ಟಡಗಳು ಧರೆಗೆ ಉರುಳಲಾರಂಭಸಿದವು, ನಾನು ಓಡಲು ಆರಂಭಿಸಿದೆ ಎಂದು ತಿಳಿಸಿದ್ದಾನೆ.