ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ಅವರ ಮೇಲೆ ಕಲ್ಲು ಎಸೆತ ಪ್ರಕರಣವನ್ನು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಇದೆಲ್ಲ ಡ್ರಾಮಾ ಎಂದು ಟೀಕೆ ಮಾಡಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಈ ಬಗ್ಗೆ ಹೇಳಿಕೆ ನೀಡಿ ಯಾರು ಕಲ್ಲು ಎಸೆದಿದ್ದಾರೆ. ತನಿಖೆ ಮಾಡಿ ಸತ್ಯಾಸತ್ಯಾತೆ ಹೊರಬರಲಿ. ಬಿಜೆಪಿಯವರು ಕಲ್ಲು ಹೊಡೆದಿದ್ದಾರಾ ಕೇಳಬೇಕು? ನಮ್ಮ ಪಕ್ಷದಲ್ಲಿ ಕಲ್ಲು ಹೊಡಿಯೋರು ಯಾರು ಇಲ್ಲ. ಅತ್ಯಂತ ಸೂಕ್ಷ್ಮವಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಪ್ರಚಾರ,ಮೆರವಣಿಗೆ ಭರಾಟೆಯಲ್ಲಿ ಆಗಿದೆ. ಧ್ವಜದ ಕಡ್ಡಿಯಿಂದ ಏಟಾಗಿದೆ ಅಂತ ಪತ್ರಿಕೆಯಲ್ಲಿ ಬರೆದಿದ್ದಾರೆ. ಮೆರವಣಿಗೆ ನೂಕು ನುಗ್ಗಲಿನಲ್ಲಿ ಆಗಿರಬಹುದು. ನಮಗೂ ಎಷ್ಟೋ ಸಲ ಆಗಿದೆ. ಹೊಲಿಗೆ ಏನು ಹಾಕಿಲ್ಲ ಅಂತಿದ್ದಾರೆ. ಅದಕ್ಕೆ ರಕ್ತ ಚೆಲ್ಲಾಡ್ತಿದೆ, ಚಿಮ್ಮಿ ಬಿಟ್ಟಿದೆ ಅಂತ ಟಿವಿ ಯಲ್ಲಿ ಬಂತು. ಈ ಡ್ರಾಮಾಗಳು ರಾಷ್ಟ್ರೀಯ ಪಕ್ಷಗಳಿಂದ ನಡೆಯುತ್ತಿದೆ. ಸೋಲಿನ ಭೀತಿಯಿಂದ ಈ ರೀತಿ ಹೊಸ ನಾಟಕ ಸೃಷ್ಟಿ ಮಾಡೋದ್ರಲ್ಲಿ ಎರಡು ಪಕ್ಷಗಳು ಸ್ಪರ್ಧೆಗೆ ಇಳಿದಿದ್ದಾರೆ. ಎಂದು ಹೆಚ್ ಡಿ ಕೆ ವ್ಯಂಗ್ಯ ವಾಡಿದ್ದಾರೆ.