ಡಾ. ಬಿ‌.ಆರ್.ಅಂಬೇಡ್ಕರ್ ಸಮುದಾಯ ಭವನ ಪರಿಶೀಲನೆ:


ಕೆಗೋಪಾಲಯ್ಯ

ಮಾರಪ್ಪನ ಪಾಳ್ಯ ವಾರ್ಡ್‌ ವ್ಯಾಪ್ತಿಯಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಡಾ. ಬಿ‌.ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ನಿರ್ಮಿಸಲಾಗಿದ್ದು, ಉದ್ಘಾಟನೆ ಮಾಡುವುದು ಬಾಕಿಯಿದೆ. ಸದರಿ ಕಟ್ಟಡವು ತಳ ಮಹಡಿ, ನೆಲ ಮಹಡಿ ಹಾಗೂ ಮೂರು ಅಂತಸ್ತಿದ್ದು, ಸಮುದಾಯ ಭವನ ಬಳಕೆ ಮಾಡಲು ಕೂಡಲೆ ದರ ನಿಗದಿಪಡಿಸಬೇಕು. ಜೊತೆಗೆ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.ಕಮಾಲನಗರದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪರಿಶೀಲನೆ:ಶಕ್ತಿ ಗಣಪತಿ ನಗರ ವಾರ್ಡ್ ಕಮಾಲನಗರದಲ್ಲಿ 8.70 ಕೋಟಿ ರೂ. ವೆಚ್ಚದಲ್ಲಿ ನೆಲ ಮಹಡಿ ಸೇರಿದಂತೆ ಮೂರು ಅಂತಸ್ತಿನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದ್ದು, ಔಷಧ ಮಳಿಗೆ, ಚಿಕಿತ್ಸಾ ಕೋಣೆ, ಪ್ರಯೋಗಾಲಯ, ಕ್ಷ-ಕಿರಣ, ಎನ್.ಐ.ಸಿ.ಯು ವಾರ್ಡ್, ಐಸಿಯು ವಾರ್ಡ್ ಡಯಾಲಿಸಿಸ್ ಕೇಂದ್ರ, ಆಪರೇಷನ್ ರೂಮ್, ಸಾಮಾನ್ಯ ವಾರ್ಡ್, ಹೆರಿಗೆಗಾಗಿ 30 ಹಾಸಿಗೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು, ಆಸ್ಪತ್ರೆಗೆ ಅವಶ್ಯಕತೆಯಿರುವ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಂಡು ಕೂಡಲೆ ಆಸ್ಪತ್ರೆಯನ್ನು ಕಾರ್ಯಾರಂಭ ಮಾಡಲು ಸೂಚಿಸಿದರು.ಪಕ್ಕದಲ್ಲಿಯೇ 9.70 ಕೋಟಿ ರೂ‌. ವೆಚ್ಚದಲ್ಲಿ ಅತ್ಯಾಧುನಿಕ ಮಾದರಿಯಲ್ಲಿ ಪ್ರೌಡಶಾಲೆ ಮತ್ತು ಪದವಿ ಪೂರ್ವ ಕಾಲೇಜು ನಿರ್ಮಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಜೊತೆ ಕೆಲ ಕಾಲ ಮಾತನಾಡಿದರು‌.
ಪರಿಶೀಲನೆ ವೇಳೆ ವಲಯ ಆಯುಕ್ತರಾದ ಡಾ. ದೀಪಕ್, ವಲಯ ಜಂಟಿ ಆಯುಕ್ತರಾದ ಶ್ರೀನಿವಾಸ್, ಮುಖ್ಯ ಇಂಜಿನಿಯರ್ ಗಳಾದ ವಿಶ್ವನಾಥ್, ಪ್ರಹ್ಲಾದ್, ಸುಗುಣಾ, ಬಸವರಾಜ್ ಕಬಾಡೆ, ವಿಜಯ್ ಕುಮಾರ್ ಹರಿದಾಸ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
Today BANGALORE WEST MAHALAKSHMI MLA(MINISTER) INSPECTION

Leave a Reply

Your email address will not be published.