ಡಿಕೆಶಿಯವರೇ ನೀವು ಮುಖ್ಯಮಂತ್ರಿ ಆಗೋದು ಡೌಟ್ ಇದೆ. ಹಾಗಾಗಿ ನೀವೆ ಬಿಜೆಪಿಗೆ ಬನ್ನಿ ನಮ್ಮ ಪಕ್ಷಕ್ಕೆ ಬಂದ್ರೆ ಒಳ್ಳೆದಾಗುತ್ತೆ – ಮುನಿರತ್ನ ಆಹ್ವಾನ

ಕಾಂಗ್ರೆಸ್‌ನಿಂದ ವಲಸೆ ಹೋಗಿರುವ ಶಾಸಕರಿಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತೆ ಆಹ್ವಾನ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವ ಮುನಿರತ್ನ, ನಮ್ಮ ಪಕ್ಷಕ್ಕೆ ಬಂದಿರೋ 17 ಜನರ ಮೇಲೆ ಡಿಕೆ ಶಿವಕುಮಾರ್ ಅವ್ರಿಗೆ ಪ್ರೀತಿಯಿದೆ. ಹಾಗಾಗಿ ಆಹ್ವಾನ ನೀಡ್ತಿದ್ದಾರೆ. ನಮಗೂ ಡಿ.ಕೆ ಶಿವಕುಮಾರ್ ಮೇಲೆ ಪ್ರೀತಿಯಿದೆ. ಅವರೇ ಬೇಕಿದ್ದರೆ ಬಿಜೆಪಿಗೆ ಬರಲಿ. ಡಿ.ಕೆ ಶಿವಕುಮಾರ್‌ಗೆ ಕಾಂಗ್ರೆಸ್ ನಲ್ಲಿ ಭವಿಷ್ಯವಿಲ್ಲ. ಜಿ.ಪರಮೇಶ್ವರ್ ಮುಂದಿನ ದಲಿತ ಮುಖ್ಯಮಂತ್ರಿ ನಾನೇ ಅಂತಾರೆ. ಇನ್ನೊಂದೆಡೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಅಂತಾರೆ. ಈ ಬಡಿದಾಟದಲ್ಲಿ ನೀವು ಮುಖ್ಯಮಂತ್ರಿ ಆಗೋದು ಡೌಟ್ ಇದೆ. ಹಾಗಾಗಿ ನೀವೆ ಬಿಜೆಪಿಗೆ ಬನ್ನಿ. ನಾವೇ ನಮ್ಮ ಪ್ರಧಾನಿಗೆ ಹೇಳ್ತಿವಿ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ತಿವಿ ಅಂತ. ಡಿಕೆಶಿಗೆ ನಮ್ಮ ಪಕ್ಷಕ್ಕೆ ಬಂದ್ರೆ ಒಳ್ಳೆದಾಗುತ್ತೆ ಎಂದು ಭವಿಷ್ಯ ನುಡಿದಿದ್ದಾರೆ.

Leave a Reply

Your email address will not be published. Required fields are marked *