ಸೋಮವಾರ ಕುಮಾರ ಕೃಪಾದಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ಅವರನ್ನ ಭೇಟಿಯಾದ ಬೆನ್ನಲ್ಲೇ ಬಿಜೆಪಿ ನಾಯಕಿ ತೇಜಸ್ವಿನಿ ಅನಂತಕುಮಾರ್ ಕಾಂಗ್ರೆಸ್ ಸೇರುತ್ತಾರಾ? ಎನ್ನುವ ಚರ್ಚೆ ಮತ್ತೆ ಮುನ್ನಲ್ಲೇ ಬಂದಿದೆ. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಹೈಕಮಾಂಡ್‌ಕೊಟ್ಟ ಟಾರ್ಗೆಟ್‌ನಂತೆ ಹೆಚ್ಚು ಸ್ಥಾನಗಳನ್ನ ಗೆಲ್ಲುವ ಪ್ಲಾನ್‌ಮಾಡಿರುವ ರಾಜ್ಯ ಕಾಂಗ್ರೆಸ್‌ನಾಯಕರು ಆಪರೇಷನ್‌ಹಸ್ತಕ್ಕೆ ಭರ್ಜರಿ ಪ್ಲಾನ್‌ಮಾಡಿದ್ದಾರೆ.ಈಗಾಗಲೇ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ದಿವಂಗತ ಮಾಜಿ ಕೇಂದ್ರ ಸಚಿವ ಅನಂತ ಕುಮಾರ್‌ಹಾಗೂ ತೇಜಸ್ವಿನಿ ಅನಂತಕುಮಾರ್‌ಅವರ ವರ್ಚಸ್ಸು ಹೆಚ್ಚಾಗಿದ್ದು, ಕಾಂಗ್ರೆಸ್‌ಪಕ್ಷಕ್ಕೆ ಅವರನ್ನ ಕರೆತರುವ ಮೂಲಕ ಹಾಲಿ ಸಂಸದ ತೇಜಸ್ವಿ ಸೂರ್ಯ ವಿರುದ್ದ ಕಣಕ್ಕಿಳಿಸಲು ಕಾಂಗ್ರೆಸ್‌ನಾಯಕರು ಪ್ಲಾನ್‌ನಡೆಸಿದ್ದಾರೆ. ಇನ್ನೂ ಬ್ರ್ಯಾಂಡ್ ಬೆಂಗಳೂರು ಕನಸು ಕಾಣುತ್ತಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಬೆಂಗಳೂರಿನ 4 ಸ್ಥಾನಗಳಲ್ಲಿ ಕನಿಷ್ಠ 2 ಗೆಲ್ಲುವ ಗುರಿ ಹೊಂದಿದ್ದಾರೆ.ತೇಜಸ್ವಿನಿ ಅನಂತಕುಮಾರ್ ಬಂದರೆ ಬ್ರಾಹ್ಮಣ, ಒಕ್ಕಲಿಗ, ಕಾಂಗ್ರೆಸ್‌ಮತಗಳಿಂದ ಗೆಲುವು ಸುಲಭ ಎಂಬುವುದು ಡಿಕೆ ಶಿವಕುಮಾರ್ ಅವರ ಲೆಕ್ಕಾಚಾರವಾಗಿದೆ.