ರಷ್ಯಾ ಜೊತೆ ಯುದ್ಧದ ಬಲೆಯಲ್ಲಿ ಸಿಲುಕಿ ಭೀಕರ ಕಾಳಗಕ್ಕೆ ಇಳಿದಿರುವ ಉಕ್ರೇನ್ ಒದ್ದಾಡುತ್ತಿದೆ. ಆದ್ರೂ ಭಾರತದ ವಿರುದ್ಧ ಏನಾದರೂ ಒಂದು ಹೇಳಿಕೆ ನೀಡಿ, ಅಥವಾ ಇನ್ನೇನಾದರೂ ಎಡವಟ್ಟು ಮಾಡಿ ಸಮಸ್ಯೆಗೆ ಸಿಲುಕಿ ಕ್ಷಮೆ ಕೇಳುತ್ತಿದೆ. ಇದೀಗ ಕಾಳಿ ಮಾತೆಗೆ ಅವಮಾನ ಮಾಡಿದ ಕಾರಣಕ್ಕೆ, ಉಕ್ರೇನ್‌ನ ವಿದೇಶಾಂಗ ಉಪ ಸಚಿವೆ ಎಮಿನಿ ಝಪರೋವಾ ಕ್ಷಮೆ ಕೇಳಿದ್ದಾರೆ. ಕಾಳಿ ಮಾತೆಗೆ ಅವಮಾನ ಮಾಡುವ ರೀತಿಯಲ್ಲಿದ್ದ ಚಿತ್ರವನ್ನ ಉಕ್ರೇನ್ ರಕ್ಷಣಾ ಸಚಿವಾಲಯ ಹೊಗಳಿತ್ತು. ಸ್ಫೋಟಕದ ಹೊಗೆಯ ಸುರುಳಿ ನಡುವೆ ಕಾಳಿ ಮಾತೆ ಚಿತ್ರ ಚಿತ್ರಿಸಿ ‘ವರ್ಕ್‌ಆಫ್ ಆರ್ಟ್’ ಎಂಬ ಟೈಟಲ್ ಕೊಟ್ಟು ಉಕ್ರೇನ್‌ರಕ್ಷಣಾ ಸಚಿವಾಲಯ ಏಪ್ರಿಲ್30ರಂದು ವಿವಾದಾತ್ಮಕ ಟ್ವೀಟ್‌ಪೋಸ್ಟ್ ಮಾಡಿತ್ತು. ಟ್ವೀಟ್‌ಗೆ ಸೋಷಿಯಲ್ ಮೀಡಿಯಾ ಗರಂ ಆಗಿತ್ತು, ಭಾರತೀಯರು ಉಕ್ರೇನ್ ಸರ್ಕಾರದ ಬೆವರಿಳಿಸಿದ್ದರು. ಹೀಗೆ ಸಿಕ್ಕಾಪಟ್ಟೆ ಆಕ್ರೋಶ ವ್ಯಕ್ತವಾದ ಬಳಿಕ ತಕ್ಷಣ ವಿವಾದಾತ್ಮಕ ಟ್ವೀಟ್ ಡಿಲೀಟ್ ಮಾಡಲಾಗಿತ್ತು. ಇದೀಗ ತಪ್ಪಿನ ಅರಿವಾಗಿ ಕ್ಷಮೆಯನ್ನೂ ಕೇಳಿದೆ.