ತಮಿಳುನಾಡಿನಲ್ಲಿ ಅಮುಲ್‌ ಆವಿನ್‌ ವಿವಾದ ಅಮುಲ್ ಹಾಲು ಸಂಗ್ರಹ ಮಾಡುವುದನ್ನ ನಿಲ್ಲಿಸಿ: ಅಮಿತ್‌ ಶಾಗೆ ಸ್ಟಾಲಿನ್‌ ಪತ್ರ

ತಮಿಳುನಾಡಿನಲ್ಲಿ ಅಮುಲ್ ಹಾಲು ಸಂಗ್ರಹ ಮಾಡುವುದನ್ನ ನಿಲ್ಲಿಸಿ ಎಂದು ಮುಖ್ಯಮಂತ್ರಿ ಸ್ಟಾಲಿನ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ. ಅಮುಲ್ ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸುವುದು ದುರದೃಷ್ಟಕರ ವಿಚಾರವಾಗಿದೆ. ಇದು ಆವಿನ್ ಹಿತಾಸಕ್ತಿಗೆ ಹಾನಿಕರ ಮತ್ತು ಸಹಕಾರಿ ಸಂಸ್ಥೆಗಳ ನಡುವೆ ಅನಗತ್ಯ ಪೈಪೋಟಿಗೆ ಕಾರಣವಾಗಿದೆ. ಇದು ಉತ್ತಮವಾದ ಬೆಳವಣಿಗೆಯಲ್ಲ. ತಮಿಳುನಾಡಿನಲ್ಲಿ ಡೈರಿ ಸಹಕಾರಿ ಸಂಸ್ಥೆಯು 1981 ರಿಂದ ಕಾರ್ಯನಿರ್ವಹಿಸುತ್ತಿದೆ. ಅಮುಲ್ ಹಸ್ತಕ್ಷೇಪದಿಂದ ಸಹಕಾರಿ ಸಂಸ್ಥೆಗಳ ಬುಡಕ್ಕೆ ಹೊಡೆತ ಬೀಳುತ್ತಿದೆ ಆವಿನ್ ಸಹಕಾರಿ ವ್ಯಾಪ್ತಿಯಡಿಯಲ್ಲಿ 9,673 ಹಾಲು ಉತ್ಪಾದಕರ ಸಹಕಾರ ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸುಮಾರು 4.5 ಲಕ್ಷ ಸದಸ್ಯರಿಂದ 35 ಎಲ್ಎಲ್ಪಿಡಿ ಹಾಲನ್ನು ಸಂಗ್ರಹಿಸುತ್ತಿದೆ. ನಮ್ಮ ವ್ಯವಸ್ಥೆಯಲ್ಲಿ ವರ್ಷ ಪೂರ್ತಿ ರೈತರಿಗೆ ಲಾಭ ಮತ್ತು ಎಲ್ಲರಿಗೂ ಏಕ ರೀತಿಯ ಬೆಲೆ ನೀಡಲಾಗುತ್ತಿದೆ. ಇಡೀ ದೇಶದಲ್ಲೇ ಕಡಿಮೆ ಬೆಲೆಯಲ್ಲಿ ಗ್ರಾಹಕರನ್ನು ತಲುಪುವ ಹಾಲು ನಮ್ಮ ರಾಜ್ಯದ್ದಾಗಿದೆ. ಅಮುಲ್ನ ಈ ಕ್ರಮವು ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಗ್ರಹಣೆ ಹಾಗೂ ಮಾರಾಟದಲ್ಲಿ ತೊಡಗಿರುವ ಸಹಕಾರಿ ಸಂಸ್ಥೆಗಳ ನಡುವೆ ಅನಗತ್ಯ ಸ್ಪರ್ಧೆಯನ್ನು ಸೃಷ್ಟಿಸುತ್ತದೆ. ಆದ್ದರಿಂದ ಅಮುಲ್ನ ಹಸ್ತಕ್ಷೇಪವನ್ನು ನಿಲ್ಲಿಸುವಂತೆ ನಿರ್ದೇಶಿಸಲು ತುರ್ತು ಮಧ್ಯಸ್ಥಿಕೆಗೆ ಅಮಿತ್ ಶಾ ಅವರಿಗೆ ವಿನಂತಿಸುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *