ಚಂದ್ರಯಾನ-3 ಯೋಜನೆಯ ವಿಕ್ರಮ್‌ಲ್ಯಾಂಡರ್‌ಹಾಗೂ ಪ್ರಗ್ಯಾನ್‌ರೋವರ್‌ಇಂದು ಚಂದ್ರಸ್ಪರ್ಶ ಮಾಡಲಿದೆ. ಚಂದ್ರನ ವಾತಾವರಣ ನಿರ್ಮಾಣಕ್ಕಾಗಿ ತಮಿಳುನಾಡಿನ ಗ್ರಾಮದಿಂದ ಮಣ್ಣನ್ನು ಇಸ್ರೋ ಬಳಸಿಕೊಂಡಿತ್ತು.ರಾಜಧಾನಿ ಬೆಂಗಳೂರಿನಿಂದ ಬರೀ 255 ಕಿಲೋಮೀಟರ್‌ದೂರದಲ್ಲಿರುವ ತಮಿಳುನಾಡಿನ ನಮಕ್ಕಲ್‌ಜಿಲ್ಲೆಯ ಎರಡು ಗ್ರಾಮಕ್ಕೂ ಚಂದ್ರಯಾನ-3 ಯೋಜನೆಗೂ ಒಂದು ಸಂಬಂಧವಿದೆ. ವಿಕ್ರಮ್‌ಲ್ಯಾಂಡರ್‌ಹಾಗೂ ಪ್ರಗ್ಯಾನ್‌ರೋವರ್‌ನ ಅಭ್ಯಾಸಕ್ಕಾಗಿ ಇಸ್ರೋ ಭೂಮಿಯಲ್ಲಿ ನಮಕ್ಕಲ್‌ನ ಎರಡು ಗ್ರಾಮದ ಮಣ್ಣನ್ನು ಬಳಸಿಕೊಂಡು, ಚಂದ್ರನ ವಾತಾವರಣವನ್ನು ನಿರ್ಮಿಸಿ ಸಂಶೋಧನಾ ಪ್ರಯೋಗಾಲಯದಲ್ಲಿ ಸಂಶೋಧನೆ ನಡೆಸಿತು. ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನಂತೆಯೇ ಗುರುತ್ವಾಕರ್ಷಣೆಯೊಂದಿಗೆ ಸಂಶೋಧನಾ ಪ್ರಯೋಗಾಲಯದಲ್ಲಿ ಇರುವ ಅನಿಲಗಳನ್ನು ಮಾತ್ರ ಬಳಸಿ ಸರಿಯಾಗಿ ಇಳಿಯುತ್ತದೆಯೇ ಎಂದು ಪರೀಕ್ಷಿಸಲಾಯಿತು. ಇದಕ್ಕಾಗಿ ಚಂದ್ರನಲ್ಲಿರುವಂತೆ ನೆಲ ಮತ್ತು ಮಣ್ಣನ್ನು ಬಳಸಲಾಗಿದೆ.ಇದೇ ಗ್ರಾಮದ ಮಣ್ಣಿನಿಂದ ಚಂದ್ರನ ವಾತಾವರಣ ನಿರ್ಮಾಣ ಮಾಡುವುದರ ಹಿಂದೆ ದೊಡ್ಡ ಕಥೆಯಿದೆ. 2019ರ ಜುಲೈ 22 ರಂದು ಭಾರತ ತನ್ನ ಚಂದ್ರಯಾನ-2 ಪ್ರಾಜೆಕ್ಟ್‌ಅನ್ನು ನಭಕ್ಕೆ ಹಾರಿಸಿತ್ತು. ಆಗಲೂ ಕೂಡ ಚಂದ್ರನ ದಕ್ಷಿಣ ಧ್ರುವ ಮುಟ್ಟುವದು ಭಾರತದ ಗುರಿಯಾಗಿತ್ತು. ಅದೇ ವರ್ಷದ ಸೆಪ್ಟೆಂಬರ್6 ರಂದು ಆರ್ಬಿಟರ್‌ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿತ್ತು. ಆದರೆ, ಚಂದ್ರನ ಸ್ಪರ್ಶದಿಂದ 2.1 ಕಿಲೋಮೀಟರ್‌ದೂರವಿರುವಾಗ ವಿಕ್ರಮ್‌ಸಂಪರ್ಕ ಕಳೆದುಕೊಂಡಿತ್ತು. ಆ ಬಳಿಕ ವಿಕ್ರಮ್‌ಲ್ಯಾಂಡರ್‌ಚಂದ್ರನ ದಕ್ಷಿಣ ಧ್ರುವಕ್ಕೆ ಅಪ್ಪಳಿಸಿದೆ ಎಂದು ಇಸ್ರೋ ತಿಳಿಸಿತ್ತು