ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಕಾವೇರಿ ನೀರು ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಸರಿಯಾಗಿ ನಿಭಾಯಿಸುತ್ತಿಲ್ಲ. ಕಾವೇರಿ ಕೊಳ್ಳದ ಜನರ ಬಗ್ಗೆ ಅವರಿಗೆ ಅರಿವಿಲ್ಲ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ನಮ್ಮ ನೀರು ಹರಿದುಬಿಟ್ಟಿದ್ದಾರೆ. ನಾಳೆ ಅವರನ್ನು ಪ್ರಶ್ನೆ ಕೇಳಿದ್ರೆ ಹೌದಾ.. ಯೋಗೇಶ್ವರ್ ಹೇಳಿದ್ನಾ ಅಂತ ಉಡಾಫೆಯಾಗಿ ಮಾತಾಡ್ತಾರೆ. ತಮಿಳುನಾಡು ಸಿಎಂ ಜೊತೆಗೆ ಡಿಕೆಶಿಗೆ ವ್ಯಾಪಾರ ಸಂಬಂಧ ಇದೆ. ಬೆಂಗಳೂರಿನಲ್ಲಿ ಇವರಿಬ್ಬರದ್ದು ಬಹಳ ವ್ಯವಹಾರಗಳಿವೆ. ರಾಜಕೀಯವಾಗಿ ಡಿಕೆಶಿ-ಸ್ಟಾಲಿನ್ ಪಾಟ್ನರ್ಸ್ ಅದಕ್ಕಾಗಿ ಕರ್ನಾಟಕ, ಮಂಡ್ಯ, ರಾಮನಗರ ಜನರ ಹಿತ ಅವರಿಗೆ ಬೇಕಿಲ್ಲ. ಹಳೇ ಮೈಸೂರು ಭಾಗದಲ್ಲಿ ಇರೋದು ಒಂದೇ ಡ್ಯಾಂ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಆಗುತ್ತೆ. ಸಮಸ್ಯೆ ಬಂದಾಗ ಮೇಕೆದಾಟು ಯೋಜನೆ ಅಂತ ಡ್ರಾಮಾ ಮಾಡ್ತಾರೆ. ಡಿ.ಕೆ ಶಿವಕುಮಾರ್ ರಿಂದ ಈ ರಾಜ್ಯದ ಜನ ಏನೂ ನಿರೀಕ್ಷೆ ಮಾಡುವ ಹಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ರು.