ಬಸವಜಯ ಮೃತ್ಯುಂಜಯ ಸ್ವಾಮೀಜಿ ಬೇಸರ ಕಳೆದ ಅಧಿವೇಶನದಲ್ಲಿ ನಮಗೆ ಸಿಎಂ ಮಾತು ಕೊಟ್ಟಿದ್ದರು. ತಾಯಿಯ ಮೇಲೆ ಪ್ರಮಾಣ ಮಾಡಿ ಡಿ.29ಕ್ಕೆ 2A ಮೀಸಲಾತಿ ನೀಡುತ್ತೇವೆಂದು ಹೇಳಿದ್ದರು. ಆದರೆ 2C, 2D ಹೊಸ ಪ್ರವರ್ಗ ರಚನೆ ಮಾಡಿ ನಮಗೆ ಘೋಷಣೆ ಮಾಡಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಮಾತನಾಡಿದ ಅವರು, 2D ಮೀಸಲಾತಿಯಲ್ಲಿ ಏನಿದೆ. ಎಷ್ಟು ಮೀಸಲಾತಿ ಎಂಬುವುದರ ಬಗ್ಗೆ ಸ್ಪಷ್ಟನೆ ಕೊಡಲಿಲ್ಲ. ನಾವು ಕೇಳಿದ್ದು 2A ಮೀಸಲಾತಿ. ಆದರೆ ಅವರು ನೀಡಿದ್ದು 2Dಯನ್ನು. ತಾಯಿಯ ಮೇಲೆ ಆಣೆ ಮಾಡಿ ಮಾತು ಕೊಟ್ಟು ತಪ್ಪಿದ್ದಾರೆ ಎಂದು ಸಿಎಂ ವಿರುದ್ಧ ಅಸಾಮಾಧಾನ ಹೊರಹಾಕಿದ್ದಾರೆ. ಒಂದು ದಿನದ ಸಾಂಕೇತಿಕವಾಗಿ ಸಿಎಂ ಮನೆ ಮುಂದೆ ಸತ್ಯಾಗ್ರಹ ಮಾಡ್ತಿದ್ದೇವೆ. ನಮ್ಮ ನೋವು ಏನಿದೆ ಇಂದು ಇವತ್ತು ತೋರಿಸಲಿದ್ದೇವೆ. ಮುಂದಿನ ಹೋರಾಟಕ್ಕೆ ಏನು ಮಾಡಬೇಕೆಂದು ನಿರ್ಣಯ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.