ಖಲಿಸ್ತಾನಿ ಉಗ್ರರು ಹಾಗೂ ಬೆಂಬಲಿಗರ ಹಾವಳಿ ವಿದೇಶದಲ್ಲಿ ಹೆಚ್ಚಾಗುತ್ತಲೇ ಇದೆ. ಇತ್ತೀಚೆಗೆ ಭಾರತದ ದೂತವಾಸ ಕಚೇರಿಗೆ ಬೆಂಕಿ ಹಚ್ಚಲಾಗಿತ್ತು. ಈಗ ಕೆನಡಾದ ವ್ಯಾಂಕೋವರ್ನಲ್ಲಿ ನಡೆದ ಭಾರತ ವಿರೋಧಿ ರ್ಯಾಲಿಯಲ್ಲಿ ಖಲಿಸ್ತಾನಿ ವ್ಯಕ್ತಿಗಳು ಭಾರತದ ಧ್ವಜಕ್ಕೆ ಬೆಂಕಿ ಹಚ್ಚಿದ್ದಾರೆ. ಅಷ್ಟೇ ಅಲ್ಲದೆ, ಭಾರತೀಯ ತ್ರಿವರ್ಣ ಧ್ವಜವನ್ನು ರಕ್ಷಿಸಲು ಧೈರ್ಯದಿಂದ ಯತ್ನಿಸಿದ ಭಾರತದ ಪರ ವ್ಯಕ್ತಿಯೊಬ್ಬನ ಮೇಲೆ ಉಗ್ರರು ಶೂಗಳಿಂದ ಹಲ್ಲೆ ನಡೆಸಿದರು. ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುಕೆಯಲ್ಲಿ ಖಾಲಿಸ್ತಾನಿ ಬೆಂಬಲಿಗರು ನಡೆಸುತ್ತಿರುವ ಭಾರತ-ವಿರೋಧಿ ನಡವಳಿಕೆ ಹಿನ್ನೆಲೆಯಲ್ಲಿ ಕೆನಡಾದಲ್ಲಿ ಮತ್ತೆ ಇಂತಹದ್ದೊಂದು ಘಟನೆ ನಡೆದಿದೆ. ಹಾಗೆ, ಪ್ರತಿಭಟನಾಕಾರರ ಹತ್ಯೆಯ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿದ ಅವರು ಅಪರಾಧದ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಬೇಕೆಂದು ಒತ್ತಾಯಿಸಿದರು. ಈ ಘಟನೆಯು ಕೆನಡಾ ಮತ್ತು ಭಾರತದ ನಡುವಿನ ಸಂಬಂಧವನ್ನು ಹದಗೆಡಿಸಿದ್ದು, ಸಿಖ್ ಪ್ರತ್ಯೇಕತಾವಾದಿ ಚಳುವಳಿಗಳ ಸುತ್ತ ಅಸ್ತಿತ್ವದಲ್ಲಿರುವ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ.