ವಿಧಾನಸೌಧದಲ್ಲಿ ವರ್ಗಾವಣೆ ಧಂದೆಗೆ ದಾಖಲೆ ನೀಡಿ ಎಂಬ ಸಚಿವರ ಹೇಳಿಕೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಅವರು, ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಒಂದು ದಾಖಲೆ ಬಿಡುಗಡೆಮಾಡಿಲ್ಲ. ಯಾರೋ ಮಂತ್ರಿ ಹೇಳಿದ್ರು ನಾವು ಹಲವಾರು ದಾಖಲೆ ಕೊಟ್ಟಿದೀವಿ ಅಂತ. ಯಾವ ದಾಖಲೆ ಕೊಟ್ಟಿದೀರಾ..? ಯಾವ ತನಿಖೆ ನಡೆದಿದೆ..? ಚುನಾವಣೆ ಸಮಯದಲ್ಲಿ ಭ್ರಷ್ಟಾಚಾರದ ಬಗ್ಗೆ ದೊಡ್ಡ ಜಾಹಿರಾತು ಹಾಕೊಂಡ್ರಿ..? ಒಂದು ದಾಖಲೆ ಆದ್ರೂ ಬಿಡುಗಡೆ ಮಾಡಿದ್ರಾ..? ಎಂದು ಪ್ರಶ್ನಿಸಿದ್ದಾರೆ.
ಸುಳ್ಳು ದಾಖಲೆ ಹೇಳಿ ಅಧಿಕಾರಕ್ಕೆ ಬಂದಿದೀರಾ. ಈಗ ನಿಮ್ಮ ಸರ್ಕಾರ ಇದೆ. ತನಿಖೆ ಮಾಡಿಸಿ ನೋಡೊಣ, ಹಿಂದಿನ ಸರ್ಕಾರದ ಹಗರಣಗಳ ಬಗ್ಗೆ ತನಿಖೆ ಮಾಡಿಸ್ತಿವಿ ಎಂದು ಗುಮ್ಮಾ ಬಿಡ್ತಿದೀರಾ? ಇದು ಸರ್ಕಾರದ ಹನಿಮೂನ್ ಪೀರೆಡ್. ಸರ್ಕಾರಕ್ಕೆ 6 ತಿಂಗಳು ಟೈಮ್ ಕೊಡಬೇಕು ಕುಮಾರಸ್ವಾಮಿ ಈವಾಗ್ಲೆ ಅಟ್ಯಾಕ್ ಮಾಡ್ತಿದ್ದಾರೆ ಎಂದು ಹೇಳುತ್ತಿದ್ದಿರಾ. ನಾನು ಆರೋಪ ಮಾಡಿದಕ್ಕೆ ದಾಖಲೆ ಕೇಳುತ್ತಿದ್ದಾರೆ. ನನ್ನ ಬಳಿ ಇರುವ ದಾಖಲೆಯನ್ನು ಎಲ್ಲಾ ಮಂತ್ರಿಗಳಿಗೂ ಒಂದೊಂದು ಕೊಡ್ತಿನಿ, ಸರ್ಕಾರದ ಬಳಿ ದಮ್ ತಾಕತ್ ಇದೇನಾ? ನಾನು ದಾಖಲೆ ಕೊಟ್ರೆ ತನಿಖೆ ಮಾಡಿಸುವಷ್ಟು ನನಗೆ ದಾಖಲೆ ತೋರಿಸುವ ಧಮ್ ಇದೆ. ದಾಖಲೆ ಪ್ರಡ್ಯೂಸ್ ಮಾಡುವ ಧಮ್ ಈ ಕುಮಾರಸ್ವಾಮಿಗಿದೆ, ಬ್ಲ್ಯಾಕ್ ಮೇಲ್ ಮಾಡಿ ಅಧಿಕಾರಿಗಳನ್ನು ಹೆದರಿಸಿ ಏನು ದರ್ಬಾರ್ ನಡೆಯುತ್ತಿದೆ ಎಲ್ಲಾ ಗೊತ್ತಿದೆ ನನಗೆ. ನಾನು ಸಿಎಂ ಇದ್ದಾಗ ಆಗಿರುವ ವರ್ಗಾವಣೆಯ ತನಿಖೆ ಮಾಡಿಸಲಿ ನಾನು ಸಿದ್ಧವಾಗಿದೇನೆ. ನಾನು ದಾಖಲೆ ಕೊಟ್ಟರೆ. ಯಾವ ಮಂತ್ರಿ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆದಿದೆ ಎಂದು ಆ ಮಂತ್ರಿಯನ್ನು ವಜಾ ಮಾಡುತ್ತಿರಾ.? ಮಂತ್ರಿಗೆ ವಜಾ ಮಾಡುವ ತಾಕತ್ ಇದೇನಾ..? ನಾನು ನನ್ನ ದಾಖಲೆಯನ್ನು ಸದನದಲ್ಲಿಯೇ ಇಡುತ್ತೇನೆ. ನಾನು ದಾಖಲೆ ಕೊಟ್ಟರೆ ಈ ಸರ್ಕಾರ ಎಲ್ಲಿರುತ್ತೊ ಗೊತ್ತಿಲ್ಲ. ಸುಮ್ಮನೆ ಸ್ವಲ್ಪ ದಿನ ಈ ಸರ್ಕಾರ ಕ್ಷೇಮವಾಗಿರಲಿ ಎಂದು ಬಿಟ್ಟಿದೀನಿ. ಸರ್ಕಾರ ತಿದ್ದುಕೊಳ್ಳುತ್ತೆ ಎಂದು ಬಿಡುತ್ತೇನೆ ಅಷ್ಟೇ ಎಂದ ಅವರು,ನಾನು ದಾಖಲೆ ನೀಡುತ್ತೇನೆ. ದಾಖಲೆ ನೋಡಿದ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ ಅಂತ ಮೊದಲು ಅವರು ಹೇಳಿ ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ಕಾಂಗ್ರೆಸ್ ಹಗಲು ದರೋಡೆ ಮಾಡುತ್ತಿದೆ.ಎಂದು ಖಾರವಾಗಿ ವಾಗ್ದಾಳಿ ನಡೆಸಿದ್ದಾರೆ.