ಮತಾಂತರ ಮಾಡಿ ಉಗ್ರವಾದಕ್ಕೆ ತಳ್ಳುವ ಐಸಿಸಿ ಉಗ್ರರ ಕುರಿತು ದಿ ಕೇರಳ ಸ್ಟೋರಿ ಚಿತ್ರ ಭಾರತದಲ್ಲಿ ವಿವಾದ ಸೃಷ್ಟಿಸುತ್ತಿದೆ. ದಿ ಕಾಶ್ಮೀರ ಫೈಲ್ಸ್ ಬಳಿಕ ಭಾರಿ ಪರ ವಿರೋಧ ಕೇಳಿ ಬಂದ ಚಿತ್ರ ದಿ ಕೇರಳ ಸ್ಟೋರಿ. ಕೇರಳ, ಪಶ್ಚಿಮ ಬಂಗಾಳ ಸೇರಿದಂತೆ ಕೆಲ ರಾಜ್ಯದಲ್ಲಿ ಈ ಚಿತ್ರಕ್ಕೆ ನಿಷೇಧ ಹೇರಲಾಗಿದೆ. ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಐಸಿಸ್ ಷಡ್ಯಂತ್ರ, ಉಗ್ರರ ಜಾಲ ಕುರಿತು ಈ ಚಿತ್ರದಲ್ಲಿ ತೋರಿಸಲಾಗಿದೆ. ಹೀಗಾಗಿ ದೇಶದಲ್ಲಿ ನಡೆಯುತ್ತಿರುವ ವ್ಯವಸ್ಥಿತಿ ಷಡ್ಯಂತ್ರದ ಅರಿವು ಜನತೆಗೆ ಇರಬೇಕು ಎಂದು ದಿ ಕೇರಳ ಸ್ಟೋರಿಗೆ ಗುರುವಾರ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಇತ್ತೀಚೆಗೆ ಕೇರಳ ಸ್ಟೋರಿ ಚಿತ್ರ ತಂಡ ಯೋಗಿ ಆದಿತ್ಯಾಥ್ ಭೇಟಿಯಾಗಿ ಚಿತ್ರ ವೀಕ್ಷಿಸುವಂತೆ ಮನವಿ ಮಾಡಿತ್ತು. ಇದರ ಬೆನ್ನಲ್ಲೇ ಇಂದು ಲೋಕಭವನ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ಪಾಲ್ಗೊಂಡ ಯೋಗಿ ಆದಿತ್ಯನಾಥ್ ವಿವಾದಿತ ದಿ ಕೇರಳ ಸ್ಟೋರಿ ಚಿತ್ರವನ್ನು ವೀಕ್ಷಿಸಿದ್ದಾರೆ. ಜೊತೆಗೆ ಕ್ಯಾಬಿನೆಟ್ ಸಚಿವರು ಕೇರಳ ಸ್ಟೋರಿ ವೀಕ್ಷಿಸಿದ್ದಾರೆ. ಕೇರಳ ಸ್ಟೋರಿ’ ಪ್ರದರ್ಶನಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿಷೇಧಿಸಿದ್ದಾರೆ. ಪಶ್ಚಿಮ ಬಂಗಾಳ ಸಿನಿಮಾಗೆ ನಿಷೇಧ ವಿಧಿಸಿದ ಮೊದಲ ರಾಜ್ಯ ಎನಿಸಿಕೊಂಡಿತ್ತು. ಈ ಸಿನಿಮಾ ದ್ವೇಷ ಮತ್ತು ಹಿಂಸೆಯನ್ನು ಹರಡುತ್ತದೆ. ಎಂಬ ಕಾರಣವನ್ನು ನೀಡಿರುವ ಮಮತಾ ಬ್ಯಾನರ್ಜಿ, ‘ಇದು ಕೇರಳ ರಾಜ್ಯಕ್ಕೆ ಅವಮಾನ ಮಾಡುತ್ತದೆ. ಈ ರೀತಿಯ ದ್ವೇಷ ರಾಜ್ಯದಲ್ಲಿ ಹರಡುವುದನ್ನು ತಪ್ಪಿಸುವುದಕ್ಕಾಗಿ ಹಾಗೂ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದಕ್ಕಾಗಿ ಸಿನಿಮಾ ಪ್ರದರ್ಶನವನ್ನು ನಿಷೇಧಿಸಲಾಗಿದೆ’ ಎಂದು ಹೇಳಿದ್ದಾರೆ. ಅಲ್ಲದೇ ಸಿನಿಮಾ ಪ್ರದರ್ಶನ ಮಾಡಿದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದ್ದಾರೆ.