ದುಷ್ಮನ್‌ಅಲ್ಲ ದೋಸ್ತಿ – ಕೊಹ್ಲಿಯನ್ನು ಹಾಡಿ ಹೊಗಳಿದ ಗಂಭೀರ್‌, ವಿರಾಟ್‌ಕೊಹ್ಲಿ ನಡೆಗೆ ಅಭಿಮಾನಿಗಳೂ ಮೆಚ್ಚುಗೆ ವ್ಯಕ್ತಪಡಿಸಿದರು

ವಿಶ್ವಕಪ್‌ಟೂರ್ನಿಯಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ವಿರಾಟ್‌ಕೊಹ್ಲಿ ಹಾಗೂ ನವೀನ್‌ಉಲ್‌ಹಕ್‌ಮೈದಾನದಲ್ಲಿ ಮುಖಾಮುಖಿಯಾಗುವ ಬಗ್ಗೆ ಸಾಕಷ್ಟು ಕುತೂಹಲವಿತ್ತು. 2023ರ ಐಪಿಎಲ್‌ಬಳಿಕ ಇದೇ ಮೊದಲಬಾರಿಗೆ ಮುಖಾಮುಖಿಯಾಗಿದ್ದು, ಆyದ್ರೆ ಮೈದಾನದಲ್ಲಿ ನಡೆದಿದ್ದೇ ಬೇರೆ.ಇಲ್ಲಿನ ಅರುಣ್‌ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ 273 ರನ್‌ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ ಪರ ರೋಹಿತ್‌ಶರ್ಮಾ ಹಾಗೂ ಇಶಾನ್‌ಕಿಶನ್‌ಜೋಡಿ ಮೊದಲ ವಿಕೆಟ್‌ಗೆ 156 ರನ್‌ಗಳ ಜೊತೆಯಾಟ ನೀಡಿತ್ತು. ಸ್ಫೋಟಕ ಇನ್ನಿಂಗ್ಸ್‌ಆರಂಭಿಸಿದ್ದ ರೋಹಿತ್‌ಶರ್ಮಾಗೆ ಸಾಥ್‌ನೀಡುತ್ತಿದ್ದ ಇಶಾನ್‌ಕಿಶನ್‌47 ರನ್‌ಗಳಿಗೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ಬಳಿಕ 3ನೇ ಕ್ರಮಾಂಕದಲ್ಲಿ ಕೊಹ್ಲಿ ಕ್ರೀಸ್‌ಗೆ ಇಳಿಯುತ್ತಿದ್ದಂತೆ ಅಭಿಮಾನಿಗಳು ಜೈಕಾರ ಹಾಕುವ ಮೂಲಕ ಸ್ವಾಗತ ಕೋರಿದರು. ಕೊಹ್ಲಿ ಕ್ರೀಸ್‌ಗೆ ಬಂದು ನವೀನ್‌ಉಲ್‌ಹಕ್‌ಬೌಲಿಂಗ್‌ನಲ್ಲಿ ಎದುರಾದ ಕೊಹ್ಲಿ ಅಬ್ಬರಿಸುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೆ ಅಭಿಮಾನಿಗಳ ನಿರೀಕ್ಷೆ ಹುಸಿಯಾಯಿತು. ನವೀನ್‌ಉಲ್‌ಹಕ್‌ಅವರ ಹಲವು ಎಸೆತಗಳನ್ನು ಕೊಹ್ಲಿ ಡಾಟ್‌ಮಾಡಿಸಿದರು. ಜೊತೆಗೆ ಕೊಹ್ಲಿ… ಕೊಹ್ಲಿ… ಎಂದು ಜೈಕಾರ ಕೂಗುತ್ತಾ ನವೀನ್‌ಉಲ್‌ಹಕ್‌ನನ್ನ ರೇಗಿಸುತ್ತಿದ್ದ ಅಭಿಮಾನಿಗಳನ್ನ ಕೈಸನ್ನೆಯಲ್ಲೇ ಸುಮ್ಮನಿರುವಂತೆ ಮನವಿ ಮಾಡಿದರು. ಅಷ್ಟೇ ಅಲ್ಲದೇ ಪಂದ್ಯದ ವೇಳೆ ನವೀನ್‌ಉಲ್‌ಹಕ್‌ನನ್ನ ಆತ್ಮೀಯವಾಗಿ ಅಪ್ಪಿಕೊಂಡು ಮಾತನಾಡಿಸಿದರು. ನವೀನ್‌ಹೆಗಲಮೇಲೆ ಕೈಯಿಟ್ಟು ಪ್ರೀತಿಯಿಂದ ಮಾತನಾಡಿಸಿದರು. ವಿರಾಟ್‌ಕೊಹ್ಲಿ ನಡೆಗೆ ಅಭಿಮಾನಿಗಳೂ ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *