ದೆಹಲಿಯಲ್ಲಿ ಗೃಹ ಸಚಿವ ಅಮಿತ್ಶಾ ಅವರನ್ನು ಬಿ. ವೈ. ವಿಜಯೇಂದ್ರ! ಭೇಟಿಯಾಗಿ ಮಾತುಕಥೆ ನಡೆಸಿದ್ದು ಕುತೂಹಲ ಮೂಡಿಸಿದೆ

ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯ ಬಿಜೆಪಿಯಲ್ಲಿ ಹಲವು ಬದಲಾವಣೆಯನ್ನ ತರುವ ನಿಟ್ಟಿನಲ್ಲಿ ಚಿಂತನೆಯನ್ನ ನಡೆಸಿದ್ದು, ರಾಜಕೀಯ ವಿದ್ಯಮಾನದಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಗುರುವಾರ ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಅವರು ಭೇಟಿಯಾಗಿ ಮಾತುಕಥೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.ಈ ಕುರಿತು ಕರ್ನಾಟಕ ಬಿಜೆಪಿ ಉಪಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪುತ್ರ ಬಿ. ವೈ. ವಿಜಯೇಂದ್ರ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಸಂಘಟನಾ ಚಾತುರ್ಯದ ಚಾಣಕ್ಯನೆಂದೇ ಬಣ್ಣಿಸಲ್ಪಡುವ ಗೃಹ ಸಚಿವ ಅಮಿತ್ಶಾ ಜೀ ಅವರನ್ನು ಭೇಟಿಮಾಡಲಾಯಿತು. ರಾಜ್ಯದಲ್ಲಿ ವೈಫಲ್ಯದ ಗ್ಯಾರಂಟಿ ಬೆನ್ನಿಗಂಟಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಡಲು ಹಾಗೂ ಮುಂದಿನ ಲೋಕಸಭಾ ಚುನಾವಣೆಗೆ ಕಾರ್ಯಕರ್ತರನ್ನು ಸಜ್ಜುಗೊಳಿಸುವ ಕುರಿತು ಮಾರ್ಗದರ್ಶನ ಪಡೆಯಲಾಯಿತು ಎಂದು ಟ್ವೀಟ್ಮೂಲಕ ತಿಳಿಸಿದ್ದಾರೆ.ಇತ್ತ ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ತಪ್ಪು ಮತ್ತೆ ಲೋಕಸಭಾ ಚುನಾವಣೆಯಲ್ಲಿಯು ಆಗಬಾರದು ಎಂದು ಈಗಗಾಲೇ ಬಿಜೆಪಿ ಹೈಕಮಾಂಡ್ರಾಜ್ಯ ನಾಯಕರಿಗೆ ಸೂಚನೆಯನ್ನ ನೀಡಿದ್ದಾರೆ ಎನ್ನಲಾಗಿದ್ದು, ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ನೇಮಕ ಕುರಿತು ಹಲವು ನಾಯಕರು ರೇಸ್ನಲ್ಲಿದ್ದು, ಬಹಿರಂಗವಾಗಿಯೇ ಬೇಡಿಕೆಯನ್ನ ಇಟ್ಟಿದ್ದಾರೆ.
ಇನ್ನೂ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಮೂಲಕ ಮತಬ್ಯಾಂಕ್ ಮರಳಿ ಪಡೆಯಲು ಕರ್ನಾಟಕದಲ್ಲಿ ವಿಜಯೇಂದ್ರ ನಾಯಕತ್ವದಲ್ಲಿ ಎದುರಿಸಲು ಬಿಜೆಪಿ ರಣತಂತ್ರ ಹಣೆಯುತ್ತಿದೆ ಎಂಬ ಕುರಿತೂ ರಾಜಕೀಯ ವಲಯಗಳಲ್ಲಿ ಚರ್ಚೆಗಳು ಆರಂಭವಾಗಿದ್ದು, ಅಮಿತ್ಶಾ ಹಾಗೂ ಜೆ ಪಿ ನಡ್ಡಾ ಅವರ ಭೇಟಿ ಇದಕ್ಕೆ ಪುಷ್ಠಿಕೊಟ್ಟಂತಿದೆ.

Leave a Reply

Your email address will not be published. Required fields are marked *