ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ದೆಹಲಿಯ ತೀಸ್ ಹಜಾರಿ ಕೋರ್ಟ್ ಆವರಣದಲ್ಲಿ ವಕೀಲರೇ ಪರಸ್ಪರ ಗುಂಡಿನ ದಾಳಿ ನಡೆಸಿದ್ದು, ವಾಗ್ವಾದಕ್ಕೆ ಸಂಬಂಧಿಸಿದಂತೆ ಎರಡು ವಕೀಲರ ಗುಂಪಿನ ಮಧ್ಯೆ ಈ ಗುಂಡಿನ ದಾಳಿ ನಡೆದಿದೆ. ಅಲ್ಲದೇ ಮತ್ತೆ ಕೆಲವರು ಕಲ್ಲು ಬಿಸಾಕುತ್ತಿರುವ ದೃಶ್ಯವೂ ವೀಡಿಯೋದಲ್ಲಿ ಸೆರೆ ಆಗಿದೆ. ಘಟನೆಯ ದೃಶ್ಯಗಳು ಅಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ನ್ಯಾಯ ನೀಡಬೇಕಾದ ವಕೀಲರೇ ಹೀಗೆ ಪರಸ್ಪರ ಕಿತ್ತಾಡಿ ಗುಂಡಿನ ದಾಳಿ ನಡೆಸಿದ್ದು ನಾಚಿಕೆಗೇಡಿಗೆ ಕಾರಣವಾಗಿದೆ. ದೆಹಲಿ ಉತ್ತರ ಡಿಸಿಪಿ ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ. ಮಧ್ಯಾಹ್ನ 1. 35ರ ಸುಮಾರಿಗೆ ಈ ಘಟನೆ ನಡೆದಿದ್ದು, ಘಟನೆ ನಡೆದ ತೀಸ್ ಹಜಾರಿ ಕೋರ್ಟ್ಸುಬ್ಜಿ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುತ್ತದೆ. ಘಟನೆಯಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.
ಈ ಘಟನೆಯಲ್ಲಿ ಬಳಸಿದ ಶಸ್ತ್ರಾಸ್ತ್ರಗಳಿಗೆ ಪರವಾನಗಿ ಪಡೆಲಾಗಿದೆಯೋ ಎಂದು ವಿಚಾರಣೆ ಮಾಡಲಾಗುತ್ತದೆ. ಯಾವುದೇ ವಕೀಲರಾಗಲಿ ಇತರರಾಗಲಿ ಅದನ್ನು ಕೋರ್ಟ್ನಲ್ಲಾಗಲ್ಲಿ ಸುತ್ತಲಿನ ಪ್ರದೇಶದಲ್ಲಾಗಲಿ ಬಳಸುವಂತಿಲ್ಲ ಎಂದು ಮಾಹಿತಿ ನೀಡಿದ್ದಾರೆ.