ರಾಷ್ಟ್ರ ರಾಜಧಾನಿ ದೆಹಲಿ – ಎನ್ಸಿಆರ್ಪ್ರದೇಶದಲ್ಲಿ ಮಧ್ಯಾಹ್ನ ಸುಮಾರು 2.30ರ ವೇಳೆಗೆ 30 ಸೆಕೆಂಡುಗಳಿಗೂ ಹೆಚ್ಚು ಕಾಲ ಭೂಮಿ ಕಂಪಿಸಿದೆ. ಇದರಿಂದ ಮನೆಯ ಸೀಲಿಂಗ್ಫ್ಯಾನ್ಗಳು, ಮನೆಯ ವಸ್ತುಗಳು ಅಲ್ಲಾಡಿದ್ದು, 5.8 ರ ತೀವ್ರತೆಯಲ್ಲಿ ಭೂಕಂಪನವಾಗಿರುವ ವರದಿಯಾಗಿದೆ. ಭೂಮಿ ಗಢಗಢ ಎಂದು ನಡುಗಿದ್ದು, ಇದರಿಂದ ಜನರು ಗಾಬರಿಯಿಂದ ತಮ್ಮ ಮನೆ, ಕಚೇರಿಗಳಿಂದ ಹೊರಗೆ ಬಂದಿದ್ದಾರೆ. ದೆಹಲಿ – ಎನ್ಸಿಆರ್ಮಾತ್ರವಲ್ಲದೆ, ಉತ್ತರಾಖಂಡದಲ್ಲೂ ಭೂಮಿ ಕಂಪಿಸಿದ್ದು, ಭಾರತವಲ್ಲದೆ, ಚೀನಾ ಹಾಗು ನೇಪಾಳದಲ್ಲೂ ಭೂಕಂಪನವಾಗಿರುವ ವರದಿಯಾಗಿದೆ.